ಬಾಣ ಕಾದಂಬರಿ

Author : ಗಂಗಾಧರ ಮಡಿವಾಳೇಶ್ವರ ತುರಮರಿ

Pages 180

₹ 150.00




Year of Publication: 1995
Published by: ಕರ್ನಾಟಕ ವಿದ್ಯಾವರ್ಧಕ ಸಂಘ
Address: ಧಾರವಾಡ

Synopsys

'ಬಾಣ ಕಾದಂಬರಿ’ ಗಂಗಾಧರ ಮಡಿವಾಳೇಶ್ವರ ತುರಮರಿ ಅವರ ಕನ್ನಡ ಅನುವಾದಿತ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಮಾಳವದೇಶದಲ್ಲಿ ವೇತ್ರವತೀ ನದೀತೀರದಲ್ಲಿ ವಿದಿಶಾ ಎಂಬ ಪಟ್ಟಣ- ವಿತ್ತು; ಅಲ್ಲಿ ಪೂರ್ವಕಾಲದಲ್ಲಿ ಶೂದ್ರಕನೆಂಬ ಅರಸನು ರಾಜ್ಯವಾಳುತ್ತಿದ್ದನು. ಈತನು ನಾಲ್ಕು ಸಮುದ್ರಗಳಿಂದ ಬಳಸಲ್ಪಟ್ಟ ಯಾವತ್ತೂ ಜಂಬೂದ್ವೀಪವನ್ನು ಆಳುತ್ತಿದ್ದುದರಿಂದ ಎಲ್ಲ ಅರಸರು ಈತನ ಅಪ್ಪಣೆಯ ಮೇರೆಗೆ ನಡೆದುಕೊಳ್ಳುತ್ತಿದ್ದರು. ಈತನು ತನ್ನ ಭುಜಬಲ ಪರಾಕ್ರಮದಿಂದ ಎಲ್ಲ ವೈರಿಭೂಪರನ್ನು ತಲೆವಾಗಿಸಿ, ಪ್ರೀತಿಯಿಂದ ಮಾಂಡಲಿಕ ಭೂಪಾಲರನ್ನು ಮೆಚ್ಚಿಸಿ, ರಾಜನೀತಿಯಿಂದ ಸರ್ವ ಪ್ರಜೆಗಳನ್ನು ಪರಿಪಾಲಿಸುತ್ತಿದ್ದನು, ಆದುದರಿಂದ, ಯಾವತ್ತು ಜನರು ಯಾವಾಗಲೂ ಸುಖದಿಂದ ಸಂಸಾರ ಮಾಡುತ್ತ ಹಾಡಿ ಹರಸಿ, ಈತನಿಗೆ ಕಲ್ಯಾಣವಾಗಲೆಂತಲೂ, ಈತನೇ ಚಿರಕಾಲ ರಾಜ್ಯವಾಳಲೆಂತಲೂ, ದೇವರನ್ನು ಬೇಡಿಕೊಳ್ಳುತ್ತಿದ್ದರು. ಬೇಡುವ ಬಡವರಿಗೆ ಕೊಡುವಲ್ಲಿ ಕೊಡುಗೈ ದೊರೆ ಈತನೇ ಎಂದರೂ ಸಲ್ಲುವದು. ಈ ಅರಸನು, ಸಕಲ ಶಾಸ್ತ್ರಗಳಲ್ಲಿಯೂ, ಕಲೆಗಳಲ್ಲಿಯ ನಿಪುಣನಾಗಿ, ಸದ್ಗುಣಗಳಿಗೆ ತವರುಮನೆಯಾಗಿದ್ದನು, ಈತನು ಪೃಥ್ವಿಯನ್ನು ಆಳುತ್ತಿರುವಾಗ, ಆನೆಗಳಲ್ಲಿಯೇ ವಂದ ವಿಕಾರವಿತ್ತಲ್ಲದೆ, ಈತನ ನಾಡೊಳಗಿನ ಜನರಲ್ಲಿದ್ದಿಲ್ಲ: ಖಡ್ಗಗಳಲ್ಲಿ ಕಲಂಕ- ವಿತ್ತಲ್ಲದೆ, ಈತನ ಆಳಿಕೆಯಲ್ಲಿದ್ದಿಲ್ಲ; ಜನರಿಗೆ ಶಾಸ್ತ್ರಚಿಂತನವಲ್ಲದೆ ಬೇರೆ ಚಿಂತೆಯಿದ್ದಿಲ್ಲ; ತೆರವಾದ ಮನೆಗಳು, ಪಗಡೆ ಚತುರಂಗಪಟಗಳ ಮೇಲಲ್ಲದೆ ಶೂದ್ರಕನ ರಾಜ್ಯದಲ್ಲಿದ್ದಿಲ್ಲ; ಕನಸಿನ ಹೊರತು, ಜನರೊಳಗೆ ಅಸಂಗತ ಭಾಷಣವಾಗುತ್ತಿದ್ದಿಲ್ಲ; ಈತನ ರಾಜ್ಯದೊಳಗಿನವರಿಗೆ, ಪರಲೋಕದ ಹೊರತು ಬೇರೆ ಯಾತರದೂ 'ಅಂಜಿಕೆಯಿದ್ದಿಲ್ಲ, ಎನ್ನುತ್ತಾರೆ

About the Author

ಗಂಗಾಧರ ಮಡಿವಾಳೇಶ್ವರ ತುರಮರಿ

ಕನ್ನಡ ಕೈಂಕರ್ಯಕ್ಕೆ ಸದಾ ಸಿದ್ಧ ಎನ್ನುವಂತೆ ಬದುಕಿನುದ್ದಕ್ಕೂ ಸಾಗಿದವರು ಗಂಗಾಧರ ಮಡಿವಾಳೇಶ್ವರ ತುರಮರಿಯವರು. 1827ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಿಸಿದರು. ಆ ಕಾಲಾವಧಿಯಲ್ಲಿ ಮರಾಠಿ ಭಾಷೆಯ ಪ್ರಾಬಲ್ಯವಿದ್ದರೂ ಸಹ, ತಾಯಿನುಡಿಯ ಅಭಿಮಾನಿಯಾದ ಬಾಲಕ ಗಂಗಾಧರ ಅವರು ಕನ್ನಡವನ್ನೆ ಕಲಿಯಲು ಅಪೇಕ್ಷಿಸಿದ್ದರಿಂದ, ಅವರ ಮಹತ್ವಾಕಾಂಕ್ಷೆಯನ್ನು ಕಂಡು ಸಂತೋಷಗೊಂಡ ಗುರು ಮಡಿವಾಳೇಶ್ವರರು ಅವರಿಗೆ ಹಳಗನ್ನಡ ಹಾಗು ಸಂಸ್ಕೃತ ಕಾವ್ಯಗಳ ಅಭ್ಯಾಸ ಮಾಡಿಸಿದರು. ಗುರುಗಳ ನಿಧನದ ನಂತರ ತುರಮರಿಯವರು ತಮ್ಮ ಹೆಸರಿನ ಮುಂದೆ ಅವರ ಹೆಸರನ್ನೂ ಸಹ ಜೋಡಿಸಿಕೊಂಡು ಗಂಗಾಧರ ಮಡಿವಾಳೇಶ್ವರ ತುರಮರಿಯಾದರು. ಧಾರವಾಡ ವಿಭಾಗದ ಜಿಲ್ಲಾಧಿಕಾರಿ 'ಎಲಿಯಟ್' ಮುಂಬಯಿ ಪ್ರಾಂತದ ...

READ MORE

Related Books