ಲೇಖಕ ಸರಜೂ ಕಾಟ್ಕರ್ ಅವರ ‘ಬಾಜೀರಾವ್ ಮಸ್ತಾನಿ’ ಒಂದು ಅದ್ಭುತವಾದ ಪ್ರೇಮಕತೆ. ಶೌರ್ಯ ಮತ್ತು ಸೌಂದರ್ಯದ ಒಂದು ಶ್ರೇಷ್ಠವಾದ ಮಿಲಾಪ. ಪ್ರೀತಿಯಲ್ಲಿ ಧರ್ಮವಾಗಲಿ, ರಾಜಕೀಯವಾಗಲಿ ಹೇಗೆ ಪಕ್ಕಕ್ಕೆ ಸರಿಯಲ್ಪಡುತ್ತದೆ ಎಂಬುದಕ್ಕೆ ಒಂದು ಸಮರ್ಥವಾದ ಉದಾಹರಣೆ. ಇತಿಹಾಸದಲ್ಲಿ ಕಳೆದುಹೋಗಿರುವ ಹೆಜ್ಜೆಗಳನ್ನು ಗುರುತಿಸಿ ಅವುಗಳಿಗೆ ಕಲ್ಪನೆಯ ಕಾವು ಕೊಟ್ಟ ಸರಜೂ ಕಾಟ್ಕರ್ ಈ ಕಾದಂಬರಿಯನ್ನು ತುಂಬ ಚೆನ್ನಾಗಿ ಬರೆದಿದ್ದಾರೆ. ಆಗಿನ ಘಟನೆಗಳಿಗೆ ಈಗಿನ ಸಮಕಾಲೀನ ಸಂದರ್ಭಗಳನ್ನು ಸಮೀಕರಿಸಿ ಕಾದಂಬರಿಯ ದಿಕ್ಕನ್ನೆ ಬದಲಿಸಿದ್ದಾರೆ. ಆಗ ನಡೆದಿರಬಹುದಾದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕಾದಂಬರಿಯ ಓದು ಮಸ್ತಾನಿಯ ಸೌಂದರ್ಯದಷ್ಟೇ, ಬಾಜೀರಾವ್ ನಶೌರ್ಯದಷ್ಟೇ ಖುಷಿಯನ್ನು ನೀಡುತ್ತದೆ.
ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...
READ MORE