‘ಬಂಗಾರದೊಡ್ಡಿ’ ಮಲೆಯೂರು ಗುರುಸ್ವಾಮಿ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಶ್ರೀಸಾಮಾನ್ಯರ ಅಸಾಮಾನ್ಯತೆಯನ್ನು ತಿಳಿಯುವಂತಹ ಹಾಗೂ ಚಾರಿತ್ರಿಕ ವಿಚಾರವಸ್ತುವನ್ನು ಒಳಗೊಂಡಂತಹ ಸೃಜನಶೀಲ ಕಾದಂಬರಿಯಾಗಿದೆ. ದೇವದಾಸಿ, ರಾಣಿಯರ ಕುರಿತ ವಿಚಾರಗಳು ಇಲ್ಲಿವೆ. ಮೈಸೂರು ರಾಜ್ಯವನ್ನು 1638 ರಿಂದ 1659ರವರೆಗೆ ಆಳ್ವಿಕೆ ಮಾಡಿದ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರ ಖಾಸಾ ವೇಶ್ಯೆ ಬಂಗಾರದೊಡ್ಡಿ. ಬಂಗಾರದೊಡ್ಡಿ ತನ್ನ ವ್ಯಕ್ತಿತ್ವದಿಂದ ಸಮಾಜಕ್ಕೆ ಆದರ್ಶವಾದವಳು. ಕಂಠೀರವ ಒಡೆಯರ್ ಅವರಿಗೆ ಹಲವು ಪತ್ನಿಯರಿದ್ದರು ಎಂಬುದನ್ನು ಈ ಕೃತಿಯು ತಿಳಿಸುತ್ತದೆ. ಆದರೆ ಈ ಕಾದಂಬರಿಯ ಮೂಲ ವಸ್ತುವಾಗಿ ಲೇಖಕರು ಬಂಗಾರದೊಡ್ಡಿಯನ್ನು ಆಯ್ಕೆಮಾಡಿದ್ದು, ಇದಕ್ಕೆ ಅವಳು ದೇವದಾಸಿ ಎಂಬುದು ಕಾರಣವಲ್ಲ. ಅಕೆಯ ಉದಾತ್ತ ಚಿಂತನೆಯ ಆಲೋಚನಾ ಕ್ರಮದಿಂದ ಈ ಕಾದಂಬರಿಯ ಮುಖ್ಯ ಪಾತ್ರವಾಗಿದ್ದಾಳೆ. ಈ ಕೃತಿಯ ಮುಖೇನ ಲೇಖಕ ಬಂಗಾರದೊಡ್ಡಿಯ ಆತ್ಮ ಸೌಂದರ್ಯವನ್ನು ವರ್ಣಿಸುತ್ತ ಸಾಂಸ್ಕೃತಿಕ ಸೌಂದರ್ಯದ ಅನಾವರಣ ಮಾಡಿದ್ದಾರೆ.
ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು 1947ರ ಆಗಸ್ಟ್ 1ರಂದು ಜನಿಸಿದರು. ತಂದೆ ಶಿವಣ್ಣ, ತಾಯಿ ಮರೆಮ್ಮ. ಪ್ರಸ್ತುತ ಮೈಸೂರಿನ ಹಿನಕಲ್‌ನ ಆಶ್ರಮ ರಸ್ತೆಯ ಮಹಾಮನೆಯಲ್ಲಿ ವಾಸ. ಜೆಎಸ್‌ಎಸ್ ಸಂಸ್ಥೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಗುರುಸ್ವಾಮಿ ಅವರ ಸೃಜನಶೀಲ ಕೃತಿಗಳಾದ ಮಹಾಯಾತ್ರಿಕ, ಅಪ್ರತಿಮವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ ಕಾದಂಬರಿಗಳು, ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ...
READ MORE