ದೇಶದ ಸ್ವಾತಂತ್ಯ್ರಕ್ಕಾಗಿ ನಡೆದ ಹೋರಾಟದ ಚಿತ್ರಣವು ಈ ಕಾದಂಬರಿಯ ಕಥಾ ವಸ್ತು ಆಗಿದೆ. ಈ ಹೋರಾಟದ ಕುರಿತು ತಮ್ಮ ಎಳೆ ವಯಸ್ಸಿನಲ್ಲಿ ಆ ಕಾಲದ ಸ್ಮರಣೆಯ ಫಲರೂಪವಾದ ಚಿತ್ರಣವೇ ಈ ಕಾದಂಬರಿ. ಇಲ್ಲಿಯ ಕಥಾವಸ್ತು ಯಾವ ರೀತಿ ಸೂಚಿತವಾಗಿದೆಯೋ ಅದರ ಕಾರಣಕ್ಕಾಗಿ ಶೈಲಿಯೂ ವಿಶಿಷ್ಟವಾಗಿದೆ. ಅಂತರ್ ದೃಷ್ಟಿಯೇ ಈ ಶೈಲಿಯ ಮುಖ್ಯ ಲಕ್ಷಣ. ವ್ಯಕ್ತಿಗಳ ಅಂತರಂಗದಲ್ಲಿ ಜರುಗಿದ ಘಟನೆಗಳನ್ನು ಅದೂ ಸಂಸ್ಮರಣೆಯ ಅಂಗವಾಗಿ ಚಿತ್ರಿಸಿದ್ದರಿಂದ ಬೇರೆ ಯಾವ ಶೈಲಿಯೂ ಶಕ್ಯವಾಗಲಿಲ್ಲಎಂದು ಸ್ವತಃ ಲೇಖಕರೇ ಕೃತಿಯ ಕುರಿತು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...
READ MORE