ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಮಾತ್ರವಲ್ಲದೆ ಅನುವಾದದಲ್ಲೂ ಆಸಕ್ತಿಯುಳ್ಳ ಉದಯ್ ಕುಮಾರ್ ಹಬ್ಬು ಅವರು ಯಾವುದೇ ವಿಚಾರವಾಗಿ ವಿಷಯ ಸಂಗ್ರಹಿಸಿ ಕೃತಿರೂಪಕ್ಕಿಳಿಸಬಲ್ಲವರು. ಇತಿಹಾಸದ ವಿಚಾರಗಳನ್ನು ಕೃತಿಗೊಳಿಸುವಲ್ಲಿಯೂ ಅವರಿಗೆ ವಿಶೇಷ ಆಸ್ಥೆ. ಈ ಕೃತಿಯಲ್ಲಿ ಅವರು ಮುಘಲ್ ವಂಶದ ಕೊನೆಯ ಸಾಮ್ರಾಟನ ಕೊನೆಯ ದಿನಗಳನ್ನು ಚಿತ್ರಿಸಿದ್ದಾರೆ. ದಾರಾ ಶುಕೋಹನ ಕುರಿತು ಕಾದಂಬರಿ ಬರೆದಿದ್ದ ಹಬ್ಬು ಅವರು ಈ ಕೃತಿಯಲ್ಲಿ ಬಹುದ್ದೂರ್ ಷಾ ಜಾಫರನ ಕುರಿತಾಗಿ, ಅದರಲ್ಲೂ ಆತನ ಕೊನೆಯ ದಿನಗಳ ಕುರಿತಾಗಿ ಬರೆದಿದ್ದಾರೆ. 1857ರ ದಂಗೆಯ ಸಂದರ್ಭವೂ ಇಲ್ಲಿ ಚಿತ್ರಿತವಾಗಿದೆ.
ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ, ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ, ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...
READ MORE