ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ಸಂಗೀತ ಆಧರಿತ ಕಾದಂಬರಿ-ಹಂಸಗೀತೆ. ಪ್ರತಿ ಪಾತ್ರವೂ ತುಂಬಾ ಆಪ್ತವೆನಿಸುತ್ತದೆ. ವೆಂಕಟಸುಬ್ಬಯ್ಯ ಸಂಗೀತಕ್ಕಾಗಿ ತುಡಿಯುವ ಪಾತ್ರ. ಗುರುವಿಗಾಗಿ ಹುಡುಕಾಟ ನಡೆಸುತ್ತಾನೆ.ಸಂಗೀತ ಸಾಧನೆಯ ಅವರ ಹಾದಿಯೇ ಕಥಾ ಹಂದರ. ಚಿತ್ರದುರ್ಗದ ಇತಿಹಾಸ, ವೈಭವದ ಚಿತ್ರಣ ಓದುಗರ ಮನಸೂರೆಗೊಳಿಸುತ್ತದೆ. ಲೇಖಕರ ಭಾಷಾ ಹರವು ತುಂಬಾ ವಿಸ್ತಾರ ಮಾತ್ರವಲ್ಲ; ಅಪ್ಯಾಯಮಾನವೂ ಆಗಿದೆ. ಸಮರ್ಥವಾದ ಭಾಷೆ, ಆಕರ್ಷಕ ನಿರೂಪಣಾ ಶೈಲಿ, ವರ್ಣನೆ, ಓದುಗರ ಮನವನ್ನು ವಶಪಡಿಸಿಕೊಳ್ಳುತ್ತದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE