’ದಾಸಕೂಟ’ ಕಾದಂಬರಿಯ ಮುಂದುವರಿದ ಭಾಗದಂತೆ ಭಾಸವಾಗುವ ಕಾದಂಬರಿ ’ಸತೀ ಸೂಳೆ’. ಮಗಳನ್ನು ವೇಶ್ಯಾವಾಟಿಕೆಯ ಬಲೆಗೆ ಸಿಲುಕಿಸಲು ಯತ್ನಿಸುವ ತಾಯಿ, ಆದರೆ ಅದರಿಂದ ಹೊರಬರಲು ತುಡಿಯುವ ಹೊಸ ತಲೆಮಾರಿನ ಸಂಘರ್ಷವೇ ಪ್ರಸ್ತುತ ಕಾದಂಬರಿ.
ಬೀchi ಅವರನ್ನು ಕುರಿತ 'ತಿಂಮಾಯಣ' ಅಭಿನಂದನಾ ಗ್ರಂಥದಲ್ಲಿ ಸಾಹಿತಿ ಚೆನ್ನಣ್ಣ ವಾಲೀಕಾರ ಹೀಗೆ ಹೇಳುತ್ತಾರೆ: ಅ.ನ.ಕೃ ಮತ್ತು ತ.ರಾ. ಸು. ಅವರು ಸೂಳೆಯರನ್ನು ಎತ್ತಿಹಿಡಿಯಲು ಬರೆದ ಕಾದಂಬರಿಗಳಿಗಿಂತ ಬೀchiಯವರವು ತುಂಬ ವಿಶಿಷ್ಟ. ಉಳಿದವರಿಗಿಂತ ಇವರ ಪಾತ್ರಗಳು ಜೀವಂತ , ಭಾಷ ನೇರ, ಇವರ ಕಾದಂಬರಿಗಳು ಹುಟ್ಟಿಸಿಕೊಂಡವುಗಳಲ್ಲ ಹುಟ್ಟಿ ಬಂದವುಗಳು, ಕಟ್ಟಿದವುಗಳಲ್ಲ ಕೂಡಿ ಬಂದವುಗಳು. ಅದಕ್ಕಾಗಿಯೇ ಬೀchiಯವರು ನಮಗೆಲ್ಲ ಆತ್ಮೀಯರಾಗಲು ಕಾರಣ, ಅವರದು ಸರ್ವಜ್ಞ ಬರಹ’.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE