ಎಸ್. ಗುರುಬಸವರಾಜ ಅವರ ಚೊಚ್ಚಲ ಕಾದಂಬರಿ ‘ಸೂಜಿ’ ಸಮಾಜದ ಓರೆ ಕೋರೆಗಳನ್ನು ಪಾತ್ರದ ಮೂಲಕ ತೆರೆದಿಡುತ್ತದೆ. ಕೃತಿಗೆ ಬೆನ್ನುಡಿ ಬರೆದ ಕಾದಂಬರಿಕಾರ ಬಿ.ಎಲ್. ವೇಣು ‘ಸರಾಗವಾಗಿ ಓದಿಸಿಕೊಳ್ಳುವ, ಕುತೂಹಲ ಕಾಯ್ದುಕೊಳ್ಳುವ ಲೇಖಕರ ಕಸುಬುಗಾರಿಕೆ ಮೊದಲ ಕಾದಂಬರಿಯಲ್ಲಿ ವ್ಯಕ್ತವಾಗುತ್ತದೆ. ಜೀವನಾನುಭವಗಳನ್ನು ದಕ್ಕಿಸಿಕೊಂಡಿರುವ ಇವರು, ಸೂಕ್ತ ವಸ್ತುವನ್ನು ಆಯ್ದುಕೊಂಡು ಸಾಮಾಜಿಕ ಕಾಳಜಿಯನ್ನು ಇಟ್ಟುಕೊಂಡು ಬರೆದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಬರಹಗಾರನಾಗುವ ತಾಕತ್ತು ಪಾಪು ಗುರುವಿಗಿದೆ. ಇಷ್ಟಾದರೂ ಕಾದಂಬರಿಯ ಬರಹ ಲೇಖಕರ ಸ್ವಾತಂತ್ರ್ಯ ಮತ್ತು ಅಭಿರುಚಿಗೆ ಬಿಟ್ಟಿದ್ದು’ ಎಂದಿದ್ದಾರೆ.
ಕಾದಂಬರಿಕಾರ ಎಸ್. ಗುರುಬಸವರಾಜ (ಪಾಪು ಗುರು) ಅವರದ್ದು ಮೂಲತಃ ದಾವಣಗೆರೆ. 1981ರಲ್ಲಿ ಜನಿಸಿದರು. ತಂದೆ - ಎಚ್. ಕೆ. ಶಿವಲಿಂಗಪ್ಪ, ತಾಯಿ - ಬಸಮ್ಮ. ಪಾಪು ಗುರು ಅವರು ವೃತ್ತಿಯಲ್ಲಿ ಮರಗೆಲಸಗಾರ ಹಾಗೂ ಪತ್ರಿಕಾವಿತರಕ. ಪ್ರವೃತ್ತಿಯಲ್ಲಿ ಕವಿ, ಕಾದಂಬರಿಕಾರ. 2018ರಲ್ಲಿ ಪ್ರಕಟವಾದ ಇವರ ಚೊಚ್ಚಲ ಕೃತಿ ‘ಮುಳ್ಳೆಲೆಯ ಮದ್ದು’ ಕವನಸಂಕಲನ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಇವರ ಪ್ರೋತ್ಸಾಹ ಧನ ಲಭಿಸಿದೆ. ...
READ MORE