ಹಿರಿಯ ಕಥೆಗಾರ, ಸಾಹಿತಿ ಎಂ.ಎಸ್. ಪುಟ್ಟಣ್ಣನವರ ಕಾದಂಬರಿ-ಮಾಡಿದ್ದುಣ್ಣೋ ಮಹಾರಾಯ. ಭಗವದ್ಗೀತೆಯ ಕರ್ಮ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ, ಕರ್ಮದ ಪಾಪಕ್ಕೆ ಅಂಜಿ ಶುದ್ಧ ವಿಚಾರ-ಆಚಾರಗಳನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸುವ ಕಾದಂಬರಿ ಇದು. ಈ ಕಾದಂಬರಿಯು ಮೊದಲ ಬಾರಿಗೆ 1915 ರಲ್ಲಿ ಪ್ರಕಟಗೊಂಡಿತ್ತು.
ಕಥೆಗಾರ, ಕಾದಂಬರಿಕಾರ ಎಂ. ಎಸ್. ಪುಟ್ಟಣ್ಣನವರ ಗದ್ಯಸಾಧನೆ ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೋಧನೆ, ಪಠ್ಯ ರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು ಅವರ ಚಲನಶೀಲ ಸಾಹಿತ್ಯ ಕೃಷಿಗೆ ಸಾಕ್ಷಿ. ಹೊಸಗನ್ನಡ ಗದ್ಯವನ್ನು ಮುನ್ನೆಲೆಗೆ ಯಶಸ್ವಿಯಾಗಿ ಶ್ರಮಿಸಿದವರಲ್ಲಿ ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದಾರೆ. ಕನ್ನಡದ ನುಡಿಗಟ್ಟಿನಿಂದ ಶ್ರೀಮಂತವಾದ ಶೈಲಿಯಲ್ಲಿ ಮೂಡಿದ ಅವರ ಕಾದಂಬರಿಗಳಾದ ‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಗ ತೆಗೆಯೇ ಮಾಯಾಂಗನೆ’ ಹಾಗೂ ‘ಅವರಿಲ್ಲದೂಟ’ ಕಾದಂಬರಿಗಳು ಪುಟ್ಟಣ್ಣನವರ ಸಾಹಿತ್ಯಕ ಸಿದ್ಧಿಯ ಅತ್ಯುತ್ತಮ ಉದಾಹರಣೆಗಳು. ಆ ಕಾಲದ ಸಾಮಾಜಿಕ ಹಾಗೂ ಜನಪದ ವಿಚಾರಗಳು ಬೆರಗುಗೊಳಿಸುವಂತೆ ಚಿತ್ರಿಸಿದ್ದಾರೆ ಪುಟ್ಟಣ್ಣ. ಅಂದಿನ ...
READ MORE