'ಬಯಲು ಆಲಯ' ಲೇಖಕಿ ರೇಖಾ ಕಾಖಂಡಕಿ ಅವರ ಸಾಮಾಜಿಕ ಕಾದಂಬರಿ. ತವರು ಮತ್ತು ಗಂಡನಮನೆಯ ಮಹತ್ವವನ್ನು ವಿವರಿಸುವ ಈ ಕಾದಂಬರಿ ಹೆಣ್ಣಿನ ಮನಸ್ಸಿನಾಳದ ತುಮುಲಗಳನ್ನು ಎತ್ತಿ ಹಿಡಿಯುತ್ತದೆ.ಸಮಾಜದ ವಿವಿಧ ಕಟ್ಟುಪಾಡು ಹಾಗೂ ಅಚರಣೆಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರಗಳನ್ನು ಹೊತ್ತುಕೊಂಡು ಸಾಗುತ್ತದೆ. ಕಳ್ಳತನದ ಸುತ್ತ ಸುತ್ತುವ ಈ ಕಥೆಯಲ್ಲಿ ಸಂಪತ್ತಿನ ಆಸೆಗೆ ಬಲಿಯಾಗುವ ಕುಟುಂಬ ಮತ್ತು ಆ ಕುಟುಂಬದ ಹೆಣ್ಣಿನ ನೋವುಗಳು ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ.
ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...
READ MORE