‘ಭಾನುಮತಿಯ ಪರಿವಾರ’ ಕುಮಾರಸ್ವಾಮಿ ತೆಕ್ಕುಂಜ ಅವರು ರಚಿಸಿರುವ ಕಾದಂಬರಿ. ಕೃತಿಯ ಕುರಿತು ತಿಳಿಸುತ್ತಾ 'ರಾವಣ ಪತ್ನಿಯ ಕುರಿತಾದ "ಮಂಡೋದರಿ" ಕಾದಂಬರಿಯನ್ನು ಬರೆದ ನನಗೆ ದುರ್ಯೋಧನ ಪತ್ನಿ ಭಾನುಮತಿಯ ಕುರಿತು ಬರೆಯಬೇಕೆಂಬ ಯೋಚನೆ ಸಹಜವಾಗಿಯೇ ಉಂಟಾಗಿತ್ತು. ಅದರ ಪರಿಣಾಮವೇ ಈ ಕೃತಿ "ಭಾನುಮತಿಯ ಪರಿವಾರ" ಎಂದಿದ್ದಾರೆ ಕುಮಾರಸ್ವಾಮಿ ತೆಕ್ಕುಂಜ. ಹಾಗೇ ಮಹಾಭಾರತ ಕೃತಿಯಲ್ಲಿ ಎಲ್ಲಿಯೂ ಭಾನುಮತಿ ಪ್ರಸ್ತಾಪ ಬಂದಂತೆ ಕಾಣುವುದಿಲ್ಲ. ಪಂಪ ಭಾರತದ "ಭಾನುಮತಿಯ ನೆತ್ತ ಪ್ರಸಂಗವು ತುಂಬ ವಿಮರ್ಶೆಗೊಳಪಟ್ಟ ಪದ್ಯ. ಕಡೆಂಗೋಡ್ಲು ಶಂಕರ ಘೋಷಯಾತ್ರೆಯಲ್ಲಿಯೂ ಭಾನುಮತಿಯ ಚಿತ್ರಣ ಸಿಗುತ್ತದೆ. ಭಾನುಮತಿ ಸ್ವಯಂವರ ಎಂಬ ಯಕ್ಷಗಾನ ಪ್ರಸಂಗ ಇದೆಯಾದರೂ ಅದು ಅಷ್ಟು ಪ್ರಚಾರಕ್ಕೆ ಬರಲಿಲ್ಲ. ಕೆಲವು ಬಿಡಿ ಲೇಖನಗಳು ಅಪರೂಪಕ್ಕೊಮ್ಮೆ ಪ್ರಕಟವಾದದ್ದಿದೆ. ಇವಿಷ್ಟು ಹೊರತು ಪಡಿಸಿದರೆ ಕನ್ನಡದಲ್ಲಿ ಭಾನುಮತಿಯ ಕುರಿತಾದ ಸಾಹಿತ್ಯ. ವಿರಳವೆಂದೇ ಹೇಳಬಹುದು. ಹಾಗಾಗಿ "ಭಾನುಮತಿ ಪರಿವಾರ, ಕಾದಂಬರಿ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಒಂದು ಅಪರೂಪದ ಕೃತಿಯೆಂದೇ ಹೇಳಬಹುದು.
ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ 'ಫಿಯಟ್ ಅಟೊಮೊಬೈಲ್ ಕಂಪೆನಿ'ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ 'ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿ ನಲ್ಲಿರುವ 'ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್'ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ 'ಒಪ್ಪಣ್ಣ. ಕಾಂ'ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ದೇನೆ. ಕನ್ನಡ ಪೌರಾಣಿಕ ಕಾದಂಬರಿ 'ಮಂಡೋದರಿ' ...
READ MORE