‘ಹೆಣ್ಣಿನ ಆಕಾಂಕ್ಷೆ’ಎಂ.ಕೆ.ಇಂದಿರಾರವರ ಕಾದಂಬರಿಯಾಗಿದೆ. ಇಂದಿರಾರವರ ಕಾದಂಬರಿಗಳಲ್ಲಿ ಶೋಷಿತ ಹೆಣ್ಣು ಮಕ್ಕಳ ಚಿತ್ರಣ ಸರ್ವೇಸಾಮಾನ್ಯ. ಇಲ್ಲಿಯೂ ಸಹ ನಾಗು ಎನ್ನುವ ಮುಗ್ಧೆಯ ಜೀವನ ಹೇಗೆ ಸಮಾಜದ ಕಟ್ಟುಪಾಡುಗಳಿಗೆ ಸಿಲುಕಿ ನುಚ್ಚುನೂರಾಗಿದೆ ಎನ್ನುವುದನ್ನು ಕಾಣುತ್ತೇವೆ . ಹದಿನೆಂಟು ವರ್ಷದ ಪುಟ್ಟ ಹೆಣ್ಣು ವಿಧವೆಯಾಗಿ ಓರಗಿತ್ತಿ ಮನೆಯಲ್ಲಿ ಚಾಕರಿ ಮಾಡಿಕೊಂಡು ಪಡಬಾರದ ಕಷ್ಟ ಪಡುವುದಲ್ಲದೇ ಭಾವನ ಅತ್ಯಾಚಾರಕ್ಕೆ ಗುರಿಯಾಗುತ್ತಾಳೆ.ಅದರ ಫಲವಾಗಿ ಗರ್ಭಿಣಿಯಾಗಿ ತವರು ಮನೆ ಸೇರಿದ ಅವಳಿಗೆ ಎಲ್ಲಿಯೂ ಆಶ್ರಯವಿಲ್ಲದೆ ಅನಂತಯ್ಯನವರ ಮನೆ ಸೇರುವ ಪರಿಸ್ಥಿತಿ ಬರುತ್ತದೆ.ಕಡೆಗೆ ಅವಳ ಮಗು ಸಹ ದಕ್ಕದೇ ಹೋಗಿ ಅವಳು ಲೋಲಳೇ ತನ್ನ ಮಗು ಎಂದು ತಿಳಿದು ಸಾಕಿ ಸಲಹುತ್ತಾಳೆ. ಇಂತಹ ಪಾಪದ ಅಮಾಯಕ ಹೆಣ್ಣುಗಳು ಅದೆಷ್ಟು ಮಂದಿ ಯಾರಿಗೂ ಅರಿವಾಗದಂತೆ ಉರಿದು ಬೂದಿಯಾಗಿ ಹೋಗಿದ್ದಾರೆ. ಅದರ ಬಗ್ಗೆ ಇಂದಿರಾರವರಿಗೆ ನೋವು ತಕರಾರುಗಳಿದ್ದರೂ ಸಹ ಅದರ ಬಗ್ಗೆ ಅವರು ಉರಿದು ಬೀಳದೆ ಶಾಂತ ಪ್ರತಿಭಟನೆ ತೋರ್ಪಡಿಸುತ್ತಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ 2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...
READ MORE