‘ಸ್ನೇಹಬಂಧನ’ ಎ. ಸರಸಮ್ಮ ಅವರ ಸಾಮಾಜಿಕ ಕಾದಂಬರಿ. ಮಾನವನ ಜೀವನ ಬಲು ಮಹತ್ವ ಪೂರ್ಣವಾದುದು ಪರಸ್ಪರ ಪ್ರೀತಿ, ಪ್ರೇಮ, ಹೊಂದಾಣಿಕೆ, ವಿಶ್ವಾಸಗಳೇ ಸುಂದರ ಬದುಕನ್ನು ರೂಪಿಸಲು ಆಧಾರ ಸ್ಥಂಭಗಳಿದ್ದಂತೆ, ಆದರೆ ಸ್ವಾರ್ಥ, ವಂಚನೆಗಳು ಅವನತಿಗೆ ಕಾರಣವಾಗುತ್ತವೆ ಈ ಸತ್ಯವನ್ನು ತಿಳಿದು ನಿಸ್ವಾರ್ಥದಿಂದ ಬಾಳಿದಾಗ ಮಹಾತ್ಮನಾಗುತ್ತಾನೆ. ಹಾಗೂ ಒಂದು ಕುಟುಂಬದ ಏಳೆಗೆ ಹಾಗೂ ಮನೆಯ ಮರ್ಯಾದೆಯನ್ನು ಕಾಪಾಡುವುದು ಕುಟುಂಬದ ಪ್ರತಿಯೊಬ್ಬರ ಜವಾಬ್ದಾರಿ ಕರ್ತವ್ಯವಾಗಿರುತ್ತದೆ. ತನ್ನ ಸುಖ, ಸಂತೋಷ ಮತ್ತು ಸ್ವಾರ್ಥ ಸಾಧನೆಗಾಗಿ ಮತ್ತೊಬ್ಬರ ಬದುಕನ್ನು ಅವನತಿಗೆ ತಳ್ಳಲು ನೋಡಿದಾಗ ಕಾಣದ ದೈವ ಮೇಲಿಂದ ನೋಡುತ್ತ ನಿರಪರಾಧಿಗಳನ್ನು ಕಾಪಾಡಿ ದುಷ್ಟರಿಗೆ ತಕ್ಕ ಶಿಕ್ಷೆ ನೀಡುತ್ತದೆ. ಸ್ನೇಹವೆಂಬುದು ಪವಿತ್ರವಾದುದು ಹಾಗೂ ಶಾಶ್ವತವಾದುದು. ಇಂಥ ವಸ್ತುವಿಷಯವನ್ನೊಳಗೊಂಡ ಕಾದಂಬರಿ ಸ್ನೇಹಬಂಧನ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE