ಸೌದಾಮಿನಿ

Author : ಎ. ಪಂಕಜ



Year of Publication: 2011
Published by: ಶ್ರೀಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ
Address: ಬೆಂಗಳೂರು
Phone: 080 2350 7170

Synopsys

1990ರಲ್ಲಿ ಮೊದಲ ಮುದ್ರಣ ಕಂಡ ಎ. ಪಂಕಜ ಅವರ `ಸೌದಾಮಿನಿ’ ಕಾದಂಬರಿ 1988ರಲ್ಲೇ 'ನಾಗರ ನೆರಳು' ಎಂಬ ಹೆಸರಿನಲ್ಲಿ 'ಸಹಕಾರ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅನೇಕ ಓದುಗರ ಮೆಚ್ಚುಗೆಯನ್ನೂ ಪಡೆದಿತ್ತು. ಇದರ ಇನ್ನೊಂದು ವೈಶಿಷ್ಟ್ಯವೆಂದರೆ, ಆರಿಸಿಕೊಂಡ ಕಥಾವಸ್ತು. ಹಿಂದಿನ ನಮ್ಮ ಲೇಖಕಿಯರು ಇತಿಹಾಸಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿ ಬರೆದ ಕಾದಂಬರಿಗಳು ವಿರಳವೆನ್ನಬಹುದು. ಲೇಖಕಿ ಪಂಕಜ ಅವರು ಟಿಪ್ಪುವಿನ ಜೀವನಕಾಲದ ಘಟನೆಗಳನ್ನು, ಅಂದಿನ ರಾಜಕೀಯ ಸಮೀಕರಣದೊಂದಿಗೆ ಚಿತ್ರಿಸಿದ್ದಾರೆ. 2011ರಲ್ಲಿ ಈ ಕಾದಂಬರಿ ಎರಡನೇ ಮುದ್ರಣ ಕಂಡಿದೆ.

ದಾಖಲೆಗಳ ಪ್ರಕಾರ ಅಂದು ನರಗುಂದದ ಮೇಲೆ ದಾಳಿಯಾಗಿತ್ತು. ದೇಸಾಯಿಯವರ ಮಗಳು ಬಲವಂತದಿಂದ ಟಿಪ್ಪುವಿನ ಜನಾನಾಗೆ ಸೇರಿಸಲ್ಪಟ್ಟಿದ್ದಳು. ಪಂಕಜ ಅವರು ದೇಸಾಯಿಯವರ ಮಗಳನ್ನು ಕಥಾನಾಯಕಿ ಮಾಡಿ, ಅವಳ ದೃಷ್ಟಿಯಲ್ಲಿ ಅಂದಿನ ವಸ್ತುಸ್ಥಿತಿಯನ್ನು ನೋಡುತ್ತಾ ಕಾದಂಬರಿಯ ಎಳೆಗಳನ್ನು ಜೋಡಿಸಿದ್ದಾರೆ. ಇತಿಹಾಸದಲ್ಲಿ ದಾಖಲಾದ ಘಟನೆಗಳನ್ನು, ವ್ಯಕ್ತಿಗಳನ್ನು ಆಧಾರವಾಗಿ ಇಟ್ಟುಕೊಂಡು, ಅವುಗಳ ತಥ್ಯವನ್ನು ಮರೆಮಾಚದೆ, ಅಲ್ಲಲ್ಲಿ ಹೊಂದಿಕೊಳ್ಳುವ ಕಲ್ಪನೆಯ ರಂಗು ಸವರಿ ಒಂದು ಸುಂದರ, ರಮ್ಯ ಕಾದಂಬರಿಯ ರಚನೆ ಮಾಡಿದ್ದಾರೆ. ಇಲ್ಲಿ ಯುದ್ಧಗಳ ಉಲ್ಲೇಖಗಳಿವೆ; ವರ್ಣನೆಗಳಿಲ್ಲ. ಅತಿ ಭಾವುಕತೆಯೂ ಇಲ್ಲ, ಅತಿಶಯೋಕ್ತಿಯೂ ಇಲ್ಲ. ಅನಾವಶ್ಯಕವಾದ ತರ್ಕವಿತರ್ಕಗಳಿಗೆ ಆಸ್ಪದ ನೀಡದೆ ಈ ಪುಸ್ತಕವನ್ನು ಒಂದು ಸಾಹಿತ್ಯ ಕೃತಿಯಾಗಿ ಓದುವುದೇ ಸಮಂಜಸ ಎನಿಸುತ್ತದೆ.

About the Author

ಎ. ಪಂಕಜ
(20 April 1932)

ಎ. ಪಂಕಜ ಅವರು ತುಮಕೂರು ಜಿಲ್ಲೆಯ ಪಾವಗಡದಲ್ಲಿ 1932 ರ ಏಪ್ರಿಲ್‌ 20ರಂದು ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದಿದ್ದರು. ಓದಿದ್ದು ಇಂಟರ್ ಮೀಡಿಯಟ್‌ ಆದರೂ ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ ಪಡೆದಿದ್ದಾರೆ. ಅವರ ಮೊದಲ ಕವನ ‘ಜ್ಯೋತಿ ನಂದಿತು’. ಇಂಗ್ಲಿಷ್‌, ಹಿಂದಿ, ತೆಲುಗು ಭಾಷೆಯಿಂದ  ಕನ್ನಡಕ್ಕೆ ಹಲವಾರು ಕಥೆಗಳನ್ನು ಅನುವಾದಿಸಿದ್ದಾರೆ. ಇವರ ಮೊದಲ ಕಥೆ ಪ್ರಕಟವಾದುದು ‘ತಾಯಿನಾಡು’ ಪತ್ರಿಕೆಯಲ್ಲಿ. ನಂತರ ‘ಸೋದರಿ’, ‘ವಿಶ್ವಬಂಧು’ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು. ‘ನಾದಭಂಗ’, ‘ವಿಜಯಗೀತ’, ‘ಸೊಗಸುಗಾತಿ’, ‘ಬಂಗಾರದ ಬಲೆ’, ‘ಕಾಗದದ ದೋಣಿ’, ‘ಬಲಿಪಶು’, ‘ಮಧು’, ‘ನಾಗರ ನೆರಳು’ ಅವರ ...

READ MORE

Related Books