‘ಮಹೋನ್ನತಿ’ ಮಹಾಲಿಂಗ ಮಂಗಿ ಅವರ ಸಾಮಾಜಿಕ ಕಾದಂಬರಿಯಾಗಿದೆ. ವಸ್ತು, ಕಥಾಹಂದರ ಪಾತ್ರಗಳು ಸಂಪೂರ್ಣ ಕಾಲ್ಪನಿಕವಾದರೂ ಲೇಖಕರ ಮೇಲೆ ಪ್ರಭಾವ ಬೀರಿದ ವಿಚಾರಗಳು ಪಾತ್ರಗಳಾಗಿ ಹುಟ್ಟನ್ನು ಪಡೆದಿದೆ. ರಾಜಕಾರಣ, ಸ್ವಾತಂತ್ಯ್ರ ಸಂಗ್ರಾಮದ ಚರಿತ್ರೆ, ಹೋರಾಟ ಗುಹ್ಯಜ್ಞಾನ ಆಧ್ಯಾತ್ಮದ ಹೂರಣವಿರುವಂತೆ, ಮಾನವ ಸಹಜ ದೌರ್ಬಲ್ಯ ಔದರ್ಯ ತ್ಯಾಗದಂತ ಉದಾತ್ತ ಚರಿತ್ರೆಯಿದು. ಪರಿಣಯ, ಪರಸಂಗ, ಮಾನವ ಸಹಜ ದೌರ್ಬಲ್ಯಗಳು ಈ ಕತೆಯಲ್ಲಿ ಬರುವ ನಾನು ಹಾಗೂ ನನ್ನ ಕುಟುಂಬ ಕೂಡ ಶ್ರಮಿಕ ಸಮುದಾಯದ ಸಂಸ್ಕೃತಿಯ ಜೀವಂತ ಪಾತ್ರಗಳಾಗಿ ಮೂಡಿಬಂದಿದೆ ಎನ್ನುತ್ತಾರೆ ಇಲ್ಲಿ ಲೇಖಕ ಮಹಾಲಿಂಗ ಮಂಗಿ.
ಮಹಾಲಿಂಗ ಮಂಗಿ ಅವರು ಮೂಲತಃ ಬೆಳಗಾವಿಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ವೃತ್ತಿಯಿಂದ ಗೋಕಾಕ ಜವಳಿಗಿರಣಿ ಕೂಲಿಕಾರ್ಮಿಕ. ಪ್ರವೃತ್ತಿಯಿಂದ ಲೇಖಕ, ಕಲಾವಿದ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ. ಕೃತಿಗಳು: ಮಹೋನ್ನತಿ(ಸಾಮಾಜಿಕ ಕಾದಂಬರಿ), ಮನ್ವಂತರ(ವೈಚಾರಿಕ ಕಾದಂಬರಿ) ...
READ MORE