‘ಕನಸೇ ಕಾಡು ಮಲ್ಲಿಗೆ’ ಮಧು ವೈ ಎನ್. ಅವರ ಕಾದಂಬರಿಯಾಗಿದೆ.ಕೃತಿಯ ಕುರಿತು ಬರೆದಿರುವ ಲೇಖಕ ಮಧು ಅವರು ಈ ಕಾದಂಬರಿ ನನ್ನ ಶಾಲಾ ಅನುಭವಗಳ ಒಟ್ಟು ಮೊತ್ತ ಎಂದಿದ್ದಾರೆ. ಜೊತೆಗೆ ಇಲ್ಲಿ ಎಷ್ಟು ಭಾಗ ನಿಜ ಎಷ್ಟು ಭಾಗ ಕಲ್ಪನೆ ಎಂದು ಹೇಳಲು ಬರಲ್ಲ. ಅನುಭವಕ್ಕೆ ಬರದ ಏನನ್ನೂ ಬರೆಯಲಾಗದು ಎಂಬುದೇ ಆದಲ್ಲಿ ಎಲ್ಲವೂ ನಿಜವೇ. ನೂರಾರು ನೈಜ ಮುಖಗಳು ಕೆಲವಾರು ಪಾತ್ರಗಳಾಗಿ ರೂಪಿತಗೊಂಡಿವೆ. ನೂರಾರು ಘಟನೆಗಳು ಹಿಡಿಯಾದ ಅಧ್ಯಾಯಗಳಾಗಿ ಮೂಡಿಬಂದಿವೆ. ಅನೇಕ ಕಡೆ ಆತ್ಮ ಉಳಿಸಿಕೊಂಡು ಆಕಾರ ಬದಲಿಸಿಕೊಂಡಿವೆ. ನನ್ನ ಶಾಲಾ ಸ್ನೇಹಿತರು ಓದಿದಾಗ ಪ್ರತಿ ಪುಟ ಕಣ್ಣ ಮುಂದೆ ಬರುವುದುಂಟು ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ ಎಂದಿದ್ದಾರೆ.
1987ರಲ್ಲಿ, ಜನಿಸಿದ ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು.ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ, ಬಿಟ್ಸ್ ಪಿಲಾನಿಯಿಂದ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಮಾಸ್ಟರ್ಸ್ ಡಿಗ್ರಿ, 2008ರಲ್ಲಿ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ. ಸಧ್ಯಕ್ಕೆ ಐಬಿಎಮ್ ಉದ್ಯೋಗಿ, ಬೆಂಗಳೂರಿನಲ್ಲಿ ವಾಸ, ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ಟೀಕೆಗೆ ಇವರ ಹವ್ಯಾಸ. ಇವರ ಚೊಚ್ಚಲ ಕೃತಿ ಕಾರೇಹಣ್ಣು" ಕಥಾ ಸಂಕಲನವು 2019ರ 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ. 'ಬಹುರೂಪಿ'ಯಿಂದ ಪ್ರಕಟವಾಗುತ್ತಿರುವ `ಫೀಫೋ' ಮಧು ...
READ MORE