ನಾಟ್ಯ ಸುಧಾ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 160

₹ 110.00




Year of Publication: 2013
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560096
Phone: 98454 49811

Synopsys

ಕಲೆಗಳಿಗೆ ಅದ್ಭುತ ಸಾಮರ್ಥ್ಯ ಇದೆ.ಗೀತ, ನಾಟ್ಯ,ಇವಕ್ಕೆಲ್ಲಾ ನೋವನ್ನು ನಲಿವನ್ನಾಗಿಸುವ ಶಕ್ತಿ ಇದೆ. ಈ ಕಾದಂಬರಿಯಲ್ಲಿ ನಾಟ್ಯಶಾಸ್ತ್ರ ಪ್ರವೀಣೆ ರಾಜಮ್ಮ ಅವರ ಶಿಷ್ಯೆ ಕವಿತ, ಚೆನ್ನಾಗಿ ನೃತ್ಯ ವಿದ್ಯೆ ಕರಗತ ಮಾಡಿಕೊಂಡು, ನಾಟ್ಯಸುಧಾ ಬಿರುದು ಪಡೆಯುತ್ತಾಳೆ. ಮದುವೆ ಮೊದಲು ತಂದೆಯ ವಿರೋಧ ಇದ್ದರೂ ಭಾಗವಹಿಸುತ್ತಿದ್ದಳು. ಮದುವೆಯಾದ ಮೇಲೆ ಆಸಕ್ತಿ ತೋರಲಿಲ್ಲ.ಚಂದ್ರಶೇಖರ ಯಾವಾಗಲೂ 'ನಾನು ಮಾತ್ರ ನನ್ನ ಕೈ ಹಿಡಿದವಳ ಅಂಗಾಂಗ ಪ್ರದರ್ಶನವನ್ನು ವಿರೋಧಿಸ್ತೀನಿ'ಎನ್ನುತ್ತಿದ್ದ. ಕವಿತ ಗಂಡನ ಮಾತನ್ನು ಧಿಕ್ಕರಿಸಿ ನಾಟ್ಯ ಮುಂದುವರಿಸಿದಳೇ?ಇಲ್ಲಾ ಗಂಡನಿಗೆ ತಕ್ಕ ಹೆಂಡತಿಯಾಗಿ,ಮನದ ಬಯಕೆಯನ್ನು ನೇಪಥ್ಯಕ್ಕೆ ಸರಿಸಿದಳೇ? ಉತ್ತರ ಈ ಕಾದಂಬರಿಯಲ್ಲಿದೆ.

ಪ್ರಗತಿಯಿಲ್ಲದ ಸಂಪ್ರದಾಯ ಹೇಗೆ ಸ್ತಬ್ದವೋ, ಹಾಗೆಯೇ ಸಂಪ್ರದಾಯವಿಲ್ಲದ ಪ್ರಗತಿ ಕೂಡ. ಭಾರತೀಯ ಕಲೆಗಳಲ್ಲಿ ನೃತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ನೃತ್ಯ ಪರಿಪೂರ್ಣವಾಗಿರುವಂತೆ ಪ್ರಾಚೀನವಾದದ್ದು ಹೌದು. ಆದರೆ ಶಾಸ್ತ್ರೀಯವಾದ ಪರಂಪರೆಯನ್ನು ಅದರ ಶುದ್ಧ ಶೈಲಿಗೆ ಧಕ್ಕೆಯಾಗದಂತೆ, ಆಧುನಿಕ ಜನಜೀವನಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವೇ ಎಂಬುದು ಪರಿಶೀಲನಾರ್ಹ ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸಿದರೇ ಈ ಕಾದಂಬರಿ ಈಗ ಬರೆದಿದ್ದರೇ ಆರಂಭ ಮಾತ್ರವಲ್ಲ, ಮುಕ್ತಾಯವೂ ವಿಭಿನ್ನ ರೀತಿಯಲ್ಲಿ ಇರುತಿತ್ತೆನಿಸಿದೆ. ಕವಿತಾಳ ಕಲೆಗೆ ಸರಿಯಾದ ನ್ಯಾಯ ಒದಗಿಸಿ ಕೊಡಲಿಲ್ಲ ಎನ್ನುವ ಗೊಂದಲ ನನ್ನಲ್ಲಿ ಇಂದಿಗೂ ಇದೆ. ಅನ್ನೋದು ಸಾಯಿಸುತೆಯವರ ಮಾತು.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...

READ MORE

Related Books