‘ಮನೆಮಗ’ ಎ.ಸರಸಮ್ಮ ಅವರ ಸಮಾಜಿಕ ಕಾದಂಬರಿಯಾಗಿದೆ. ಸಂಸಾರದ ರಥ ಮುಂದೆ ಸಾಗಲು ಹಾಗೂ ಕುಟುಂಬದ ಏಳೆಯಾಗಲು ಗಂಡು ಹೆಣ್ಣು ಇಬ್ಬರು ಆ ರಥದ ಚಕ್ರಗಳಾಗಿ ಸರಿಸಮಾನವಾಗಿ ಸಾಗಿದಾಗ ಮಾತ್ರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಕಾರಣವಾಗುತ್ತದೆ. ನಾನು ಹುಟ್ಟಿ ಬೆಳೆದ ಮನೆಯ ಹಿರಿಯರ ಕಷ್ಟ ಸುಖಗಳನ್ನು ಅರಿತು ಅವನ ನೋವು ನಲಿವಿನಲ್ಲಿ ಭಾಗಿಯಾಗಿ ಬಾಳುವುದು 'ಮನೆಮಗ'ನ ಕರ್ತವ್ಯ ಮತ್ತು ಜವಾಬ್ದಾರಿ. ಹೆತ್ತವರು ನೂರಾರು ಕಷ್ಟಗಳನ್ನನುಭವಿಸಿ ಮಕ್ಕಳ ಬದುಕಿಗೊಂದು ಭದ್ರವಾದ ಬುನಾದಿಯನ್ನು ರೂಪಿಸಿ ಸ್ವತಂತ್ರವಾಗಿ ಬಾಳಲು ಉತ್ತಮ ಮಾರ್ಗದರ್ಶನ ತೋರಿಸಿರುತ್ತಾರೆ.
ಅಂತವರು ವಯಸ್ಸು ಮಾಗಿ ಮುಪ್ಪಾದಾಗ ಅವರನ್ನು ಕಾಪಾಡಿ ಕಾಯುವುದು ಮಕ್ಕಳ ಜವಾಬ್ದಾರಿ ಇದನ್ನರಿತು ಮಕ್ಕಳು ಸಂಸಾರದ ಹೊಣೆ ಹೊತ್ತಾಗ ಮನೆಯಲ್ಲಿ ಸಂತಸದ ಹೊನಲು ಹರಿಯುತ್ತದೆ. ಮನೆಗೆ ಬಂದ ಸೊಸೆ ತಾನು ಮೆಟ್ಟಿದ ಮನೆಯ ವಾತಾವರಣಕ್ಕೆ ಹೊಂದಿಕೊಂಡು ಮನೆ ಮಂದಿಯ ಕ್ಷೇಮವನ್ನು ಕಾಪಾಡಿ ಗಂಡನ ಹೆಗಲಿಗೆ ತಾನೂ ಹೆಗಲು ಕೊಟ್ಟು ಸಾಗಿದಾಗ ಮಾತ್ರ ಅದೊಂದು ಮಾದರಿ ಕುಟುಂಬವಾಗುತ್ತದೆ. ಇಂತಹ ಮಾದರಿ ಕುಟುಂಬಗಳು ಎಲ್ಲೆಡೆ ತಲೆ ಎತ್ತಿ ನಿಲ್ಲಲಿ ಎಂಬುದನ್ನು “ಮನೆಮಗ” ಎಂಬ ಸಾಮಾಜಿಕ ಕಾದಂಬರಿಯು ತಿಳಿಸಿಕೊಡುತ್ತದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE