ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರ ಸಾಮಾಜಿಕ ಕಾದಂಬರಿ ‘ಕಣ್ಣು ತುಂಬಿದ ಕರುಣೆ’. 2015ರಲ್ಲಿ ಈ ಕೃತಿ ನಾಲ್ಕನೇ ಮುದ್ರಣವನ್ನು ಕಂಡಿದೆ. ‘ಕಾದಂಬರಿ ಪ್ರಪಂಚವು ಕೇವಲ ಜೀವನ ಪ್ರದರ್ಶನವಲ್ಲ, ಅದು ಜೀವನ ದರ್ಶನವೂ ಆಗಿದೆ. ಜೀವನವು ಬರಡು ಭೂಮಿಯಲ್ಲ, ಬರಡು ಭೂಮಿಯಲ್ಲಿ ರಸದೊರತೆಯನ್ನು ಚಿಮ್ಮಿಸುವುದೇ ಅದರ ಶ್ರೇಷ್ಠತೆ.ನನ್ನ ಕಾದಂಬರೀ ಕತೆಗಳಿಂದ ಪ್ರಭಾವಿತರಾದ ಬೆಂಗಳೂರಿನ ‘ಶೈಲಾಶ್ರೀ’ ಬಳಗದ ಶ್ರೀ ಎ. ಸಿ. ನರಸಿಂಹ ಮೂರ್ತಿಯವರೂ ಅವರ ಗೆಳೆಯರೂ ಈಗಾಗಲೇ ನನ್ನ ಧರ್ಮಸಂಹಿತೆಯನ್ನು ರಜತ ಪರದೆಯ ಮೇಲೆ ಯಶಸ್ವಿಯಾಗಿ ತಂದಿದ್ದಾರೆ. ಇದಕ್ಕಾಗಿ ಶ್ರೀ ಎ. ಸಿ. ನರಸಿಂಹಮೂರ್ತಿಯವರಿಗೂ ನಿರ್ದೇಶಕರಾದ ಶ್ರೀ ಸಿಂಗ್ ಠಾಕೂರ್ ಅವರಿಗೂ ಶ್ರೀ ಎಸ್. ಕೆ. ಭಗವಾನ್ ಅವರಿಗೂ ಶ್ರೇಷ್ಠ ಕ್ಯಾಮರಾಮ್ಯಾನ್ ಶ್ರೀ ದೊರೈರಾಜ ಅವರಿಗೂ ಕೃತಜ್ಞನಾಗಿದ್ದೇನೆ’ ಎಂಬುದಾಗಿ ಕೃಷ್ಣಮೂರ್ತಿಯವರು ಮುನ್ನುಡಿಯ ಮಾತುಗಳಲ್ಲಿ ಬರೆದುಕೊಂಡಿದ್ದಾರೆ.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE