ಮಿರ್ಜಿ ಅಣ್ಣರಾಯರು ಬರೆದ ಐತಿಹಾಸಿಕ ಕಾದಂಬರಿ-ಸಮ್ರಾಟ್ ಶ್ರೇಣಿಕ. ಸುಮಾರು 2500 ವರ್ಷಗಳ ಹಿಂದೆ ಜೈನ ಪುರಾಣದ ವ್ಯಕ್ತಿ. ಈತನನ್ನು ಭವಿಷ್ಯತ್ ಕಾಲದ ತೀರ್ಥಂಕರರನಾಗುವನೆಂದು ಜೈನ ಪರಂಪರೆಯು ನಂಬುತ್ತಾ ಬಂದಿದೆ. ಶ್ರೇಣಿಕ, ಮಹಾವೀರ ಹಾಗೂ ಅಜಾತಶತ್ರು ಇವರೆಲ್ಲರೂ ಐತಿಹಾಸಿಕ ವ್ಯಕ್ತಿಗಳೇ. ಇತಿಹಾಸ ಹಾಗೂ ಪುರಾಣಕಥೆಗಳು ಸೇರಿದ ಕಥಾವಸ್ತು ಇಲ್ಲಿದೆ. ಶ್ರೇಣಿಕನ ಜೀವನ ಪ್ರಸಂಗವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಎರಡು ರಾಜ್ಯಗಳ ಮಧ್ಯೆ ನಡೆದ ಹೋರಾಟದ ಪ್ರಸಂಗವೂ ಸೇರಿದಂತೆ ಸುಂದರ ಪ್ರಣಯ ಕಥೆಯೂ ಈ ಕಾದಂಬರಿಯ ಸಾಹಿತ್ಯಕ ಮೌಲ್ಯವನ್ನು ಹೆಚ್ಚಿಸಿದೆ.
ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು. ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...
READ MORE