'ಧರಿತ್ರಿ' ಆರತಿ ವೆಂಕಟೇಶ್ ಅವರ ಕಾದಂಬರಿಯಾಗಿದೆ. ಎಳೆ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಜಗತ್ತಿನಲ್ಲೇ ಅತ್ಯಂತ ಅಮಾನುಷ ಕೃತ್ಯ. ಇಂಥ ಪ್ರಕರಣಗಳಲ್ಲಿ ಮಕ್ಕಳಿಗೆ ನಿಕಟವಾಗಿರುವ ಬಂಧು ಬಳಗದವರೋ, ಸ್ನೇಹಿತರೋ ಅಥವಾ ಮನೆ ಕೆಲಸದವರೋ ಇಂಥ ಹೀನ ಕೃತ್ಯವನ್ನೆಸಗುವ ಸಂದರ್ಭಗಳೇ ಹೆಚ್ಚು! ಆದರೆ ಮಕ್ಕಳಿಗೆ ಶಿಕ್ಷಣ ನೀಡಿ ಮಾರ್ಗದರ್ಶನ ತೋರುವ ಉಪಾಧ್ಯಾಯರೇ ಅಂಥ ಅಮಾನವೀಯ ಕೃತ್ಯಕ್ಕಿಳಿದರೆ? ಇಂಥದ್ದೊಂದು ಪ್ರಕರಣವನ್ನು ಆಧರಿಸಿ ರಚಿಸಿದ ಕಾದಂಬರಿ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE