Servival of the fittest ಎಂಬ ವಿಜ್ಞಾನಿಯೊಬ್ಬರ ಹೇಳಿಕೆಯಂತೆ ಇಂದಿನ ಸಮಾಜ ನಡೆಯುತ್ತಿದೆ. ತನ್ನ ಉದ್ದೇಶ ತನ್ನ ಸ್ವಾರ್ಥ, ತನ್ನ ಲಾಭ ಎಂದು ವ್ಯಕ್ತಿಗಳು ಮನುಷ್ಯತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. `A criminal is not born’ ‘ಕೊಲೆಗಾರನಾಗೇ ಯಾರೂ ಹುಟ್ಟುವುದಿಲ್ಲ’ ಸನ್ನಿವೇಶ ಅವನನ್ನು ಆ ರೀತಿ ಪರಿವರ್ತನೆಗೊಳಿಸುತ್ತದೆ. ಎಂಬ ನಿದರ್ಶನವನ್ನು ಆಧಾರವಾಗಿಟ್ಟುಕೊಂಡು ನಾನು ಈ ಕಾದಂಬರಿಯನ್ನು ರಚಿಸಿದ್ದೇನೆ ಎಂಬುದಾಗಿ ಲೇಖಕಿ ಆರತಿ ವೆಂಕಟೇಶ್ ಅವರು ಹೇಳಿದ್ದಾರೆ. ಕೃತಿಯು 2016ರಲ್ಲಿ ಎರಡನೇ ಮುದ್ರಣವನ್ನು ಕಂಡಿದೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE