ಲೇಖಕ, ಕತೆಗಾರ ರಾಜೇಶ್ ಶೆಟ್ಟಿಯವರ ಕಾದಂಬರಿ ಹಾವು ಹಚ್ಚೆಯ ನೀಲಿ ಹುಡುಗಿ. ಬೆಂಗಳೂರಿಗೆ ವೃತ್ತಿ ಸಲುವಾಗಿ ವಲಸೆ ಬಂದ ಹುಡುಗರ ಕತೆಯಿಂದ ಆರಂಭವಾಗುವ ಈ ಕಾದಂಬರಿ ಒಂದು ಊರಿನ ಆತ್ಮವನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ. ಹಿರಿಯ ಕತೆಗಾರ ಜೋಗಿಯವರು ಇದು ಹೊಚ್ಚ ಹೊಸ ನಿರೂಪಣಾ ಶೈಲಿಯ ಕಾದಂಬರಿ ಎಂದು ಬರೆದಿದ್ದಾರೆ. ಮತ್ತೊಬ್ಬ ಕತೆಗಾರ ವಿಕಾಸ್ ನೇಗಿಲೋಣಿ ದುರಂತವಲ್ಲದ ದುರಂತ ಕಾದಂಬರಿ ಇದು ಎಂದು ಕರೆದಿದ್ದಾರೆ.
ಲೇಖಕ ರಾಜೇಶ್ ಶೆಟ್ಟಿ(1988) ಅವರು ಮೂಲತಃ ಮೂಡಬಿದರೆಯವರು. ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಡೇಂಜರ್ zone’ ಅವರ ಮೊದಲ ಕೃತಿ. ಅವರ ಹಲವಾರಿ ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE