ಇದ್ದೂ ಇಲ್ಲದ ಸಂಬಂಧಗಳು

Author : ರೇಖಾ ಕಾಖಂಡಕಿ

Pages 260

₹ 110.00




Year of Publication: 1999
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮೀ ಭವನ, ಸುಭಾಷ್ ರೋಡ್, ಹೊಸಯಲ್ಲಾಪುರ್, ಧಾರವಾಡ, ಕರ್ನಾಟಕ -580001
Phone: 08362441822

Synopsys

ರೇಖಾ ಕಾಖಂಡಕಿ ಅವರ ‘ಇದ್ದೂ ಇಲ್ಲದ ಸಂಬಂಧಗಳು’ ಕಾದಂಬರಿಯಾಗಿದೆ. ಒಂದು ಕುಟುಂಬದಲ್ಲಿ ಹೆಣ್ಣಿನ/ಪತ್ನಿಯ ಸ್ಥಾನಮಾನ ವೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಈ ಕಾದಂಬರಿಯಲ್ಲಿದೆ. ಆಸ್ತಿಯ ಆಸೆಗಾಗಿ ಇರುವ ಸಂಬಂಧಗಳನ್ನು ಇಲ್ಲವಾಗಿಸಿಕೊಳ್ಳುವ ಮನುಷ್ಯನ ಕ್ಷುಲ್ಲಕ ಪ್ರವೃತ್ತಿಯನ್ನು, ಧರ್ಮಶಾಸ್ತ್ರಗಳನ್ನು ತಮ್ಮ ಅನುಕೂಲಕ್ಕೆ ಬೇಕಾದಂತೆ ತಿರುಚಿ ಬಳಸಿಕೊಳ್ಳುವ ಆಷಾಢಭೂತಿಗಳ ಲೋಭವನ್ನೂ ಲೇಖಕಿ ರೇಖಾ ಕಾಖಂಡಕಿಯವರು ಈ ಕಾದಂಬರಿಯಲ್ಲಿ ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.ಕಾದಂಬರಿಯಲ್ಲಿ ಬಳಸಿದ ಸ್ಥಳೀಯ ಕನ್ನಡ ಭಾಷೆಯ ಸೊಗಡು ಆಪ್ತವಾಗುತ್ತದೆ.

About the Author

ರೇಖಾ ಕಾಖಂಡಕಿ
(09 June 1951)

ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...

READ MORE

Related Books