ಅಜ್ಞಾನತವಾಸ ಅನುಭವಿಸಲು ಪಾಂಡವರು ಕಾಡಿಗೆ ಬಂದಾಗ ಅವರು ಅನುಭವಿಸಿದ ಸಂಕಷ್ಟಗಳು ಹಾಗೂ ಅವುಗಳನ್ನು ಎದುರಿಸಿಕೊಂಡ ಬಗೆಗಳ ಕುರಿತು ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ವಿವರವಾಗಿ ಬರೆದ ಕೃತಿ-ವನದಲ್ಲಿ ಪಾಂಡವರು. ಅಜ್ಞಾತವಾಸದ ನಿಯಮಗಳನ್ನು ಮುರಿಯಲು ಧುರ್ಯೋಧನನ ಯೋಜನೆಗಳಿಗೆ ಪಾಂಡವರ ಎಚ್ಚರಿಕೆಯ ನಡೆಗಳು, ಕೀಚಕನ ಸಂಹಾರದಂತಹ ಪ್ರಸಂಗಗಳು, ಅರಗಿನ ಮನೆಗೆ ಬೆಂಕಿ ಇಟ್ಟ ಸನ್ನಿವೇಶಗಳು ಹೀಗೆ ಪಾಂಡವರು ವನದಲ್ಲಿದ್ದಾಗಿನ ಕಥನಗಳನ್ನು ಲೇಖಕರು ನೆನಪಿಸುತ್ತಾ, ಮಹಾಭಾರತದ ಮಹಾಕಾವ್ಯದ ಹರವುವನ್ನು ತೋರುತ್ತಾರೆ.
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...
READ MORE