ಈ ಪುಸ್ತಕದಲ್ಲಿ ಲೇಖಕರ ವೃತ್ತಿ ಜೀವನದ 25 ವಿಭಿನ್ನ ಸಂದರ್ಭದಲ್ಲಿನ ಅನುಭವಗಳ ಕಥೆಗಳು ಇವೆ. ಕೆಲವೊಂದು ಬರಹ ಗಂಭೀರವಾಗಿ, ಇನ್ನು ಕೆಲವು ಆಪ್ತವಾಗುತ್ತದೆ. ತನ್ನ ಮೊದಲ ಕಥೆಯಾದ 'ಮೊದಲ ತಪ್ಪು' ವಿನಲ್ಲಿ ಡಾಕ್ಟರ್ ಹೇಗೆ ದಾರಿ ತಪ್ಪಿದರು ಎನ್ನುವಲ್ಲಿಂದ ಶುರುವಾದ ಕಥೆಗಳು ಹಳ್ಳಿಯಲ್ಲಿನ ವೈದ್ಯರ ಕಷ್ಟಕಾರ್ಪಣ್ಯಗಳ ಆಧಾರಿತ ಕಥೆಗಳನ್ನು ವಿವರಿಸಿದೆ. ಶವ ಪರೀಕ್ಷೆಯನ್ನು ವೈದ್ಯರ ದೃಷ್ಟಿಯಿಂದ ಮಾತ್ರ ನೋಡದೆ ಪತ್ತೇದಾರಿ ರೀತಿಯಲ್ಲೂ ಮುಂದುವರಿಸಿದೆ. ಆತ್ಮಹತ್ಯೆ ಎಂದು ಬಿಂಬಿತವಾದ ಮರಣ ಹೇಗೆ ಕೊಲೆ ಎಂದು ಸಾಬೀತಾಯಿತು, ಪೊಲೀಸರ ಕಣ್ಣಿಗೆ ಕಾಣದ ಸಾಕ್ಷಿ ಹೇಗೆ ವೈದ್ಯರ ಕಣ್ಣಿಗೆ ಬಿತ್ತು, ಜನರೆಲ್ಲರ ಬಾಯಿಯಲ್ಲಿದ್ದ ಕೊಲೆ, ಹೇಗೆ ಇನ್ಯಾವುದೋ ದಾರಿ ಹಿಡಿಯಿತು ಇತ್ಯಾದಿ ಕಥೆಗಳು ಇಲ್ಲಿವೆ. ವಿಧಿಯಾಟ ಬಲ್ಲವರು ಯಾರು ಎಂಬ ಕತೆ ಮನಸ್ಸನ್ನು ಹಿಂಡುತ್ತದೆ. ಒಂದು ಸಾವನ್ನು ಹೇಗೆ ಒಬ್ಬೊಬ್ಬರು ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ ಎಂಬುದು ಇಲ್ಲಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಶಿಸ್ತು ಮತ್ತು ಒಡನಾಟ, ಅವರ ಜೀವನ ಶೈಲಿಯ ವಿವರಣೆ ಕೂಡಾ ಈ ಪುಸ್ತಕದಲ್ಲಿದೆ. ಸೂಕ್ಷ್ಮ ದೃಷ್ಟಿ ಹೇಗೆ ಕೊಲೆಯನ್ನು ಕಂಡು ಹಿಡಿಯ ಬಹುದು ಇತ್ಯಾದಿ ಕಥೆಗಳು ಇಲ್ಲಿವೆ. ಈ ಪುಸ್ತಕದ ಮುಖ ಚಿತ್ರಣವನ್ನು ವೈದ್ಯ ವಿದ್ಯಾರ್ಥಿನಿ ರೀಯಾ ಜಾಕಬ್ ರವರು ಸುಂದರವಾಗಿ ರಚಿಸಿದ್ದಾರೆ. ಎಲ್ಲಾ ಜನಸಾಮಾನ್ಯರು, ವೈದ್ಯರು, ವಕೀಲರು, ಪೊಲೀಸರು ತಿಳಿದು ಕೊಳ್ಳುವ ಅನೇಕ ವಿಷಯಗಳು ಈ ಪುಸ್ತಕದಲ್ಲಿ ಬಿಂಬಿತವಾಗಿದೆ .
1950ನೇ ಇಸವಿಯಲ್ಲಿ ಸೋಮವಾರ ಪೇಟೆಯಲ್ಲಿಜನಿಸಿದರು.ಇವರ ತಂದೆ ಬಾಲಕೃಷ್ಣ ,ತಾಯಿ ನೀಲಮ್ಮ. ಪೋಷಕರು ಅಧ್ಯಾಪಕರಾಗಿ ಕೊಡಗಿನ ಎಲ್ಲಾ ಕಡೆ ಕೆಲಸ ಮಾಡುತ್ತಿದ್ದರಿಂದ ,ಡಾಕ್ಟರ್ ಸೂರ್ಯ ಕುಮಾರ್ ಅವರು ಬಾಲ್ಯವನ್ನು ಭಾಗಮಂಡಲ, ಸಂಪಾಜೆ , ಮಡಿಕೇರಿಯ ಸರಕಾರಿ ಪ್ರೌಢಶಾಲೆಯಲ್ಲಿ, ( ಕನ್ನಡ ಮಾಧ್ಯಮದಲ್ಲಿ), ಪಿ ಯು ಸಿ ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ನಂತರ ಎಂ .ಬಿ. ಬಿ.ಎಸ್ ಮೈಸೂರಿನ ಸರಕಾರಿ ಕಾಲೇಜಿನಲ್ಲಿ. ಬೆಂಗಳೂರಿನ ಸರಕಾರೀ ವೈದ್ಯಕೀಯ ಕಾಲೇಜನಲ್ಲಿ ವಿಧಿ ವಿಜ್ಞಾನ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವೀರ ರಾಜಪೇಟೆ, ಸಂಪಾಜೆ ,ಬೆಂಗಳೂರು, ಮತ್ತು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇವರ ...
READ MORE