ಓದುತ್ತಾ ಹೋದಂತೆ ಮೇಲ್ನೋಟದಲ್ಲಿನ ಬರಹಗಳು ಓದುಗರಿಗೆ ಹಾಸ್ಯವಾಗಿ ಕಂಡರೂ ಸಾಮಾಜಿಕ ಸಮಸ್ಯೆಗಳ ಕುರಿತಾದ ವ್ಯಂಗ್ಯ ಕಣ್ಣಿಗೆ ಕಟ್ಟುತ್ತದೆ. ಬರಹಗಳಲ್ಲಿನ ವ್ಯಂಗ್ಯ ಮತ್ತು ಭಾಷಾ ಪ್ರಯೋಗ ಈ ಪುಸ್ತಕದ ಅತ್ಯಂತ ಆಕರ್ಷಣಿಯ ವಿಷಯ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಷಯಗಳ ಕುರಿತು ವ್ಯಂಗ್ಯಪೂರಿತ ವಿಶ್ಲೇಷಣೆಯನ್ನು ಈ ಪುಸ್ತಕದಲ್ಲಿ ಕಾಣಬಹುದು.
ಆಧುನಿಕ ಅಧಿಕಾರಶಾಹಿ, ಇನ್ಶೂರೆನ್ಸ್ ಮಾರಾಟಗಾರರ ಚಾತುರ್ಯತೆ, ಆಫರ್ಗಳನ್ನು ನೀಡುವ ಫೋನ್ ಕರೆಗಳು ಹೀಗೆ ಹಲವು ವಿಷಯಗಳ ಬಗೆಗೆ ಬಹಳ ಸುಲಲಿತವಾದ ಬರಹಗಳನ್ನು ಲೇಖಕರು ಈ ಪುಸ್ತಕದಲ್ಲಿ ನಮೂದಿಸಿದ್ದಾರೆ. ಇಂತಹ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಕೆಲಸಗಾರರ ಕಷ್ಟ ಭವಣೆಗಳ ಕುರಿತು ಹಾಸ್ಯ ಲೇಪಿತ ಮಾತುಗಳ ಮೂಲಕ ವಿವರಿಸಿದ್ದಾರೆ. ಇಲ್ಲಿ ತಿರಸ್ಕಾರದ ಲವಲೇಷವೂ ಇಲ್ಲ. ಆದರೆ ಬದುಕಿನಲ್ಲಿ ಇರು ಇತಿ ಮಿತಿಗಳ ಕುರಿತು, ಅವುಗಳನ್ನು ಅರಿತು ಅವುಗಳನ್ನು ಹಾಸ್ಯಾಸ್ಪದವಾಗಿ ಪರಿಗಣಿಸುವುದು ಕಷ್ಟದ ಕೆಲಸ. ಅಂತಹ ಕಷ್ಟವನ್ನು ಲೇಖಕರು ಬಹಳ ಸುಂದರವಾಗಿ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ. ಕೇವಲ ಹಾಸ್ಯ ಮಾತ್ರವಲ್ಲದೇ ಜೀವನದ ಕುರಿತಾಗಿ ಚಿಂತಿಸಲು ಅವಕಾಶವನ್ನು ಮಾಡಿಕೊಡುವ ಈ ಪುಸ್ತಕ ಸಾಹಿತ್ಯಾಸಕ್ತರ ಮನಸ್ಸಿಗೆ ಮುದ ನೀಡುವಲ್ಲಿ ಸಂಶಯವಿಲ್ಲ.
'ಕು. ಗೋ' ಎಂದೇ ಜನಪ್ರಿಯರಾಗಿರುವ ಲೇಖಕ ಹೆರ್ಗ ಗೋಪಾಲ ಭಟ್ಟರು ತಮ್ಮ ಪುಸ್ತಕ ಪ್ರೀತಿಗಾಗಿ ಹೆಸರಾದವರು. ಅವರನ್ನು ಕುರಿತು ’ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ’ ಎಂಬ ಗ್ರಂಥ ಪ್ರಕಟವಾಗಿದೆ. ಗೋಪಾಲ ಭಟ್ಟರು ಜನಿಸಿದ್ದು 1938 ರ ಜೂನ್ 6ರಂದು. ತಂದೆ ಅನಂತ ಪದ್ಮನಾಭ ಭಟ್ಟ ಮತ್ತು ತಾಯಿ ವಾಗ್ದೇವಿಯಮ್ಮ. ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯಮಟ್ಟದಲ್ಲಿ 37ನೇ Rank ಪಡೆದ ಅವರು ಮೈಸೂರಿನ ಯುವರಾಜ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮತ್ತು ಬಿ. ಎಸ್ಸಿ ಓದು ಕೈಗೊಂಡರು. ಕಾರಣಾಂತರಗಳಿಂದ ಅವರಿಗೆ ಬಿ. ಎಸ್ಸಿ ಪೂರ್ಣಗೊಳಿಸಲಾಗಲಿಲ್ಲ. ಉದ್ಯೋಗಕ್ಕೆ ಸೇರಿದ ನಂತರ ಅಂಚೆ ತೆರಪಿನ ಮೂಲಕ ...
READ MORE