ಭಾರತೀಯ ತತ್ವಶಾಸ್ತ್ರದ ಭಾಗವಾಗಿರುವ ತಂತ್ರ ವಿದ್ಯೆ ಅನಾದಾರಗೊಂಡದ್ದೂ ನಿಜ. ತಾಂತ್ರಿಕರ ನಿಗೂಢ ಬದುಕು, ವಿಚಿತ್ರ ಬದುಕು ಅದಕ್ಕೆ ಕಾರಣವಿರಬಹುದು. ಆದರೆ ಹಾಗೆ ಭಯಪಡುವ ಅಗತ್ಯವಿಲ್ಲ ಮತ್ತು ನಿಜಕ್ಕೂ ತಂತ್ರ ಎಂಬುದು ಏನು ಎನ್ನುವುದನ್ನು ಕನ್ನಡಿಗರಿಗೆ ಪರಿಚಯಿಸಲು ಸತ್ಯಕಾಮರು ರಚಿಸಿದ ಕೃತಿ ’ತಂತ್ರಯೋನಿ’.
ಕೃತಿಯ ಮೊದಲನೇ ಭಾಗ ತಂತ್ರ ಎಂದರೆ ಏನು?, ತಂತ್ರ ವಿಭಿನ್ನವೇನಲ್ಲ, ತಂತ್ರದಲ್ಲಿ ಗುರು ಶಿಷ್ಯರು, ದೀಕ್ಷೆ, ಮಂತ್ರ, ಜಪ, ತಂತ್ರದ ಕೆಲಸ ಉಪಾಸನೆ ಕುರಿತು ಚರ್ಚಿಸುತ್ತದೆ. ಎರಡನೇ ಭಾಗ ಮಾತು ಮತ್ತು ಮೌನ ಯಾವುದು ಎಷ್ಟಿರಬೇಕು? ಜ್ಞಾನ ಎಂದರೆ ಏನು?, ಯೋಗ ಮತ್ತು ಕಾಮ, ಮದ್ಯದ ಇತಿಮಿತಿ ಮತ್ತು ಮಾನಿನಿಯ ಸ್ಥಿತಿಗತಿ, ಅನುಭವ ನೀಡುವ ಸಾಕ್ಷಾತ್ಕಾರ ಇತ್ಯಾದಿ ವಿಚಾರಗಳಿವೆ. ಮೂರನೇ ಭಾಗದಲ್ಲಿ ತಂತ್ರದ ಉಪಯೋಗಗಳು ಪಾರಮ್ಯ ಮೆರೆದಿವೆ. ತಂತ್ರದ ಬಗ್ಗೆ ನಿಖರವಾದ ಮಾಹಿತಿ ಅರಿಯಲು ಬಯಸುವವರಿಗೆ ಇದೊಂದು ಉತ್ತಮ ಆಕರ.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE