ತಂದೆ ತಾಯಿ ದೇವರಲ್ಲ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 184

₹ 120.00

Buy Now


Year of Publication: 2016
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 8026607011

Synopsys

‘ತಂದೆ ತಾಯಿ ದೇವರಲ್ಲ’ ಲೇಖಕ ಜೋಗಿ ಅವರ ಸ್ಫೂರ್ತಿದಾಯಕ ಘಟನೆ ಮತ್ತು ಅವುಗಳ ವ್ಯಾಖ್ಯಾನದ ಲೇಖನ ಸಂಕಲನ. ಇಲ್ಲಿ ಯುವ ಜನಾಂಗಕ್ಕೆ ಸ್ಫೂರ್ತಿದಾಯಕ ಮಾತುಗಳು ಮತ್ತು ತಿಳಿವಳಿಕೆ ನೀಡುವ ಬರೆಹಗಳಿವೆ. ತಂದೆ ತಾಯಿ ಮಕ್ಕಳ ಮೇಲೆ ಇರಿಸಿಕೊಳ್ಳುವ ಭರವಸೆಗಳು ಹೇಗೆ ಮೂಲೆ ಸೇರುತ್ತವೆ. ಕಾಲಕ್ಕೆ ಬದಲಾಗುವ ಗುಣವಿದೆ, ಬದಲಾವಣೆಗೆ ತುಡಿಯುವ ಯುವ ಮನಸ್ಸುಗಳು ಅನರ್ಥಕ್ಕೆ ವ್ಯಯಿಸುವ ಸಮಯವನ್ನು ತಂದೆ-ತಾಯಿಗಳ ಪ್ರೀತಿಗೆ ನೀಡದೇ ದಾರಿ ತಪ್ಪುವ ಸಾಧ್ಯತೆಗಳು ಮತ್ತು ಅವು ತಂದೊಡ್ಡುವ ಸಮಸ್ಯೆಗಳ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books