ಮೈಸೂರು ಮಹಾರಾಜರವರ ಕಾಲೇಜಿನ ಕರ್ನಾಟಕದ ಸಂಘದ ಸದಸ್ಯರು ಒಮ್ಮೆ ಸಂಘದ ಅಧ್ಯಕ್ಷ ಬಿ.ಎಂ. ಶ್ರೀಕಂಠಯ್ಯ ಅವರ ನೇತೃತ್ವದಲ್ಲಿ ಸದಸ್ಯರ ಕವನಗಳನ್ನು ವಾಚಿಸುವ ಸಮಾರಂಭ ಹಮ್ಮಿಕೊಂಡಿದ್ದರು. ಬಹುತೇಕ ಕವಿಗಳು ಉತ್ತಮವಾಗೇ ಕವಿತೆಗಳನ್ನು ವಾಚಿಸಿದರು. ಆದ್ದರಿಂದ, ಈ ಕವನಗಳನ್ನು ಸೇರಿ ಇನ್ನಿತರೆ ಹೊಸ ಕವಿಗಳ ಕವನಗಳನ್ನು ಸೇರಿಸಿ ಕವನ ಸಂಕಲನ ಪ್ರಕಟಿಸುವ ಯೋಜನೆ ರೂಪಗೊಂಡಿದ್ದರ ಫಲವೇ ಈ ಪುಸ್ತಕ ಎಂದು ಸಂಘದ ಉಪಾಧ್ಯಕ್ಷರು ಹಾಗೂ ಕೃತಿಯ ಸಂಪಾದಕರೂ ಆದ ಟಿ.ಎಸ್.ವೆಂಕಣ್ಣಯ್ಯ ಅವರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಕವನ ಸಂಕಲನದಲ್ಲಿ ಕೆ.ವಿ. ಪುಟ್ಟಪ್ಪ, ಬಿ.ಕೃಷ್ಣಮೂರ್ತಿ, ಎಂ.ವಿ.ಸೀತಾರಾಮಯ್ಯ, ದಿನಕರ ದೇಸಾಯಿ, ತೀ.ನಂ.ಶ್ರೀಕಂಠಯ್ಯ, ಜೆ.ಪಿ.ರಾಜರತ್ನಂ ಅವರು ಸೇರಿದಂತೆ ಅಂದು ವಿದ್ಯಾರ್ಥಿಗಳಾಗಿದ್ದ ಹಲವಾರು ಕವಿಗಳು ಕವನ ಬರೆದಿದ್ವು, ಒಟ್ಟು 28 ಕವನಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...
READ MORE