‘ತಬ್ಬಲಿ ಪಯಣ’ ಕೆ.ಪಿ. ನಾರಾಯಣಪ್ಪ ಅವರ ಕಾದಂಬರಿಯಾಗಿದೆ. ಇದು ತಬ್ಬಲಿ ಪಯಣದ ಕಥೆ, ತಬ್ಬಲಿತನದ ಹಿಂಸೆಯ ಲೋಕದಲ್ಲಿ ಮುಳುಗಿದ ಮನುಷ್ಯನ ರೋಧನ. ಕೃತಿಯ ಪಾತ್ರಧಾರಿ ರಂಗನಾಥನ ಕುರಿತು ಮಾತನಾಡುವ ಈ ಕಾದಂಬರಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಗನಾಥನು ರಾತ್ರಿ ಮಲಗಿದ್ದಲ್ಲೇ ಶವವಾಗಿದ್ದದನ್ನು ಕುರಿತು ತಿಳಿಸುತ್ತದೆ. ಇಂತಹ ಅನಾಥ ಮನುಷ್ಯರ ಬದುಕನ್ನು ಕಟ್ಟಿಕೊಡಲು, ಚಿತ್ರಿಸಲು ಡಾ.ಕೆ.ಪಿ.ನಾರಾಯಣಪ್ಪ ಆಸಕ್ತಿವಹಿಸಿದ್ದಾರೆ. ಇನ್ನು ಇದು ಮೇಲ್ನೋಟಕ್ಕೆ ರಂಗನಾಥನ ಚರಿತ್ರೆ ಎನ್ನಿಸಿದರೂ ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ಸುತ್ತಲಿನ ಸಮಾಜದ ಹಲವಾರು ಆಯಾಮಗಳ ಜೀವನಕ್ಕೆ ಪೂರಕವಾದ ಹಲವು ಮೌಲ್ಯಗಳನ್ನು ಸಾರುವ ಕೃತಿಯಾಗಿದೆ. ಕಲ್ಪನೆಗಳ ಸರಮಾಲೆಯನ್ನು ಪೋಣಿಸುತ್ತಾ ಕಥೆ ಹೆಣೆಯುವುದು ಸಹಜವಾಗಿ ಕಷ್ಟವಾಗುತ್ತದೆ. ನಿರೂಪಕರು ಹತ್ತಿರದಿಂದ ಕಂಡ ಪಾತ್ರವೊಂದರ ಕಷ್ಟ ಕಾರ್ಪಣ್ಯಗಳ ನೈಜ ಬದುಕನ್ನು ರಂಗನಾಥನ ಪಾತ್ರದ ಮುಖೇನ ಚಿತ್ರಿಸುವ ಮೂಲಕ ಅನಾಥರ ಬದುಕಿನ ಬವಣೆಯನ್ನು ಅನಾವರಣ ಮಾಡಿದ್ದಾರೆ. ಬದುಕಿನ ಹಲವು ಪ್ರತಿಕೂಲ ಸಂದರ್ಭಗಳು, ಸಂಘರ್ಷಗಳ ನಡುವೆ ಅನಾಥ ಪ್ರಜ್ಞೆಯಿಂದ ಹತಾಶರಾಗಿ ಬದುಕುತ್ತಿರುವ ಹಲವರಿಗೆ ರಂಗನಾಥನ ಪಾತ್ರ ಧನಾತ್ಮಕ ಮಾದರಿಯಾಗಿ ಸ್ಪೂರ್ತಿ ನೀಡುವುದರ ಮೂಲಕ ಓದಿಗರ ನೆನಪಲ್ಲಿರುತ್ತದೆ.
ಡಾ. ರುಕ್ಕಿಣಿ ರಘುರಾಮ್ ಶಿಕ್ಷಣತಜ್ಞೆ ಹಾಗೂ ಬರಹಗಾರ್ತಿ. ಬೆಂಗಳೂರಿನ ಪ್ರಸಿದ್ಧ ನ್ಯಾಷನಲ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ, ಆನಂತರ ಮೈಸೂರಿನ ವಿಶ್ವ ವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ. ಮದರಾಸು ವಿಶ್ವವಿದ್ಯಾನಿಲಯದಿಂದ ಎ.ಆರ್. ಕೃಷ್ಣ ಶಾಸ್ತ್ರಿಗಳ ಬದುಕು-ಬರಹ ಕುರಿತ ಮಹಾ ಪ್ರಬಂಧಕ್ಕೆ ಪಿ.ಹೆಚ್‌ಡಿ. ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ವಿದುಷಿ ಶ್ರೀಮತಿ ಸರೋಜಮ್ಮ ಅನಂತರಾಮಯ್ಯ ಅವರಿಂದ ಕಾವ್ಯವಾಚನ ಶಿಕ್ಷಣ, ವಿದುಷಿ ಶ್ರೀಮತಿ ಸ್ವರ್ಣ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ, ಬಾಲ್ಯದಿಂದ ತಂದೆ ಶ್ರೀ ಡಿ.ಆರ್. ವೆಂಕಟರಮಣನ್ ಹಾಗೂ ಅವರ ಗುರುಗಳಾದ ಡಾ. ಡಿ.ವಿ. ಗುಂಡಪ್ಪನವರ (ಡಿ.ವಿ.ಜಿ.) ಬರಹಗಳಿಂದ ...
READ MORE