ಡಾ. ರುಕ್ಕಿಣಿ ರಘುರಾಮ್ ಶಿಕ್ಷಣತಜ್ಞೆ ಹಾಗೂ ಬರಹಗಾರ್ತಿ. ಬೆಂಗಳೂರಿನ ಪ್ರಸಿದ್ಧ ನ್ಯಾಷನಲ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ, ಆನಂತರ ಮೈಸೂರಿನ ವಿಶ್ವ ವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ. ಮದರಾಸು ವಿಶ್ವವಿದ್ಯಾನಿಲಯದಿಂದ ಎ.ಆರ್. ಕೃಷ್ಣ ಶಾಸ್ತ್ರಿಗಳ ಬದುಕು-ಬರಹ ಕುರಿತ ಮಹಾ ಪ್ರಬಂಧಕ್ಕೆ ಪಿ.ಹೆಚ್‌ಡಿ. ಪದವಿ ಪಡೆದಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ವಿದುಷಿ ಶ್ರೀಮತಿ ಸರೋಜಮ್ಮ ಅನಂತರಾಮಯ್ಯ ಅವರಿಂದ ಕಾವ್ಯವಾಚನ ಶಿಕ್ಷಣ, ವಿದುಷಿ ಶ್ರೀಮತಿ ಸ್ವರ್ಣ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ, ಬಾಲ್ಯದಿಂದ ತಂದೆ ಶ್ರೀ ಡಿ.ಆರ್. ವೆಂಕಟರಮಣನ್ ಹಾಗೂ ಅವರ ಗುರುಗಳಾದ ಡಾ. ಡಿ.ವಿ. ಗುಂಡಪ್ಪನವರ (ಡಿ.ವಿ.ಜಿ.) ಬರಹಗಳಿಂದ ಪ್ರಭಾವಕ್ಕೆ ಒಳಗಾದ ಕ್ರೈಸ್ಟ್ ಕಾಲೇಜಿನ ಅಂತರ ಕಾಲೇಜು ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
ಡಾ. ಎ.ಆರ್. ಕೃಷ್ಣಶಾಸ್ತ್ರಿಗಳ ಬದುಕು-ಬರಹ ಕುರಿತ ಮಹಾ ಪ್ರಬಂಧವು ಲೋಕ ಶಿಕ್ಷಣ ಟ್ರಸ್ಟ್ ವತಿಯಿಂದ ಪುಸ್ತಕವಾಗಿ ಪ್ರಕಟಿಸಲಾಗಿದೆ. ಡಾ. ಬಿ.ಜಿ.ಎಲ್. ಸ್ವಾಮಿ, ವಿದ್ವಾನ್ ಎನ್. ರಂಗನಾಥ ಶರ್ಮ, ಪ್ರೊ. ಶ್ರೀಕೃಷ್ಣ ಭಟ್ ಆರ್ತಿಕಜೆ, ಪ್ರೊ. ಕೆ. ಸಂಪದ್ಧಿರಿರಾವ್ ಮುಂತಾದವರ ವ್ಯಕ್ತಿಚಿತ್ರಗಳು, ಪ್ರವಾಸ ಕಥನ ಹಾಗೂ ಸಣ್ಣ ಕಥೆಗಳು ಕನ್ನಡದ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಮದ್ರಾಸಿನ ಕನ್ನಡಿಗರ ಕೂಟದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ. ಪ್ರಸ್ತುತ ಬೆಂಗಳೂರಿನ ವಿಮೆನ್ಸ್ ಪ್ಲೇಸ್ ಫೀಸ್ ಶಾಲೆಯ ಆಡಳಿತ ಮಂಡಳಿಯಲ್ಲಿ ಗೌರವ ಖಜಾಂಚಿಯಾಗಿ ಕಾರ್ಯ ನಿರ್ವಹಣೆ.