ತಂದೆ-ತಾಯಿಗಿಂತ ಹುಡುಗಿಯ ಪ್ರೀತಿ ದೊಡ್ಡದೇನಲ್ಲ ಎಂಬುದು ಈ ಕಾದಂಬರಿಯ ವಸ್ತು. ತನ್ನ ಪ್ರೀತಿಯ ಹುಡುಗಿ ತೀರಿಕೊಂಡಿದ್ದು, ಇನ್ನು ಮುಂದೆ ಬಾಳು ಅರ್ಥಹೀನ ಎಂದು ತಿಳಿದಿದ್ದ. ಆದರೆ, ತಾನು ಚೆನ್ನಾಗಿ ಓದುವುದಾಗಿ ಪಾಲಕರಿಗೆ ನೀಡಿದ ವಾಗ್ದಾನ-ಕರ್ತವ್ಯ ಪ್ರಜ್ಞೆ ಈತನಲ್ಲಿ ಜಾಗೃತವಾಗಿ ಕೊನೆಗೂ ಉತ್ತಮ ಅಂಕ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುತ್ತಾನೆ. ಆದರೆ, ತೀರಿ ಹೋದ ಹುಡುಗಿಯ ನೆನಪು ಕಾಡುತ್ತಲೇ ಇರುತ್ತದೆ. ಈ ಮಧ್ಯೆ, ಮತ್ತೊಂದು ಹುಡುಗಿಯು ಈತನನ್ನು ಮದುವೆಯಾಗಲು ಆಸೆ ಪಟ್ಟಾಗ, ಈತ ತನ್ನ ಪ್ರಿಯತಮೆಯ ಸಮಾಧಿ ಬಳಿ ಕರೆದೊಯ್ದುಇಲ್ಲಿಯೇ ಪ್ರೀತಿ ಹುದುಗಿದೆ ಎಂದು ಹೇಳುತ್ತಾನೆ. ನಂತರದ ದಿನಗಳಲ್ಲಿ ಇದೇ ಹುಡುಗಿಯನ್ನು ಮದುವೆ ಮಾಡಿಕೋ ಎಂದು ಪಾಲಕರಿಂದಲೇ ಸಲಹೆ ಬಂದಾಗ ಮದುವೆ ನೆರವೇರುತ್ತದೆ. ತನ್ನ ಈ ಮದುವೆಗೆ ಪಾಲಕರ ಒಪ್ಪಿಗೆಯೇ ಪ್ರಮುಖ ಎಂಬುದಾಗಿ ನೀಡುವ ಸಂದೇಶ ಈ ಕಾದಂಬರಿಯಲ್ಲಿದೆ.
ಕೆ. ಸಿರಿ ಅವರು 1995ರ ಜೂನ್ 11 ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲ ಬೊಮ್ಮನಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಕೆ. ರಾಮಪ್ಪ ಹಾಗೂ ತಾಯಿ ಸಿದ್ಲಿಂಗಮ್ಮ. ಸದ್ಯ, ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ತಮ್ಮಡ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ನೀರಜೇಗೇಕೆ ನಿಕೃಷ್ಟ ಬದುಕು’ ಹಾಗೂ ’ಸ್ವಪ್ನದಲ್ಲಿ ಸೊರಗಿದ ಪ್ರೀತಿ’ ಇವರ ಕಾದಂಬರಿಗಳು. ...
READ MORE