ಕೆ. ಸಿರಿ ಅವರು 1995ರ ಜೂನ್ 11 ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲ ಬೊಮ್ಮನಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಕೆ. ರಾಮಪ್ಪ ಹಾಗೂ ತಾಯಿ ಸಿದ್ಲಿಂಗಮ್ಮ. ಸದ್ಯ, ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ತಮ್ಮಡ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
’ನೀರಜೇಗೇಕೆ ನಿಕೃಷ್ಟ ಬದುಕು’ ಹಾಗೂ ’ಸ್ವಪ್ನದಲ್ಲಿ ಸೊರಗಿದ ಪ್ರೀತಿ’ ಇವರ ಕಾದಂಬರಿಗಳು.