'ಸ್ಪಂದನ ಸಿರಿ’ ಜಿ.ಎಸ್ ಕಲಾವತಿ ಮಧುಸೂದನ ಅವರ ಬದುಕು ಬರಹದ ಉಪನ್ಯಾಸ ಮಾಲಿಕೆಯಾಗಿದೆ. ಪ್ರಸ್ತುತ ಕೃತಿ “ಸ್ಪಂದನ ಸಿರಿ” ಹಾಸನದ ಸಮಾಜ ಸೇವಕ ಹವ್ಯಾಸಿ ಬರಹಗಾರರಾದ ಶ್ರೀಮತಿ ಕಲಾವತಿ ಮಧುಸೂದನರವರು ಸಂಪಾದಿಸಿದ ಈ ಲೇಖನಗಳ ಸಂಕಲನ ಹೇಗಿದೆ ಎಂದರೇ.. ಆಯುಷ್ಯ ನಮ್ಮ ಕೈಯ್ಯಲ್ಲಿಲ್ಲಾ ಆದನ್ನು “ಸಮಯ” ಎಂಬ ಕೊಳಗದಿಂದ ಅಳೆಯಲಾಗುತ್ತದೆ. ಆ ಸಮಯವೂ ನಮ್ಮ ನಿಯಂತ್ರಣದಲ್ಲಿಲ್ಲಾ, ಆದರೇ ಸಮಯವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಾ ಅದನ್ನು ಸಾರ್ಥಕ ರೀತಿಯಲ್ಲಿ ಬಳಸಿಕೊಂಡವರು ಮಾತ್ರವೇ ಬದುಕಿನಲ್ಲಿ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂಬುದನ್ನು ಈ ಕೃತಿ ತಿಳಿಸುತ್ತದೆ
ಜಿ.ಎಸ್.ಕಲಾವತಿಮಧುಸೂದನ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನವರು. ತಂದೆ ಜಿ.ಆರ್.ಶ್ರೀನಿವಾಸಯ್ಯ,ತಾಯಿ ಕೆ.ಪಿ.ರಾಜಮ್ಮ. ಹಿಂದಿ ಭಾಷೆಯಲ್ಲಿ ಬಿ.ಎ, ಬಿ.ಇ.ಎಡ್,ಹಾಗೂ ಸಮಾಜಶಾಸ್ತ್ರದಲ್ಲಿ ಎಮ್.ಎ ಸ್ನಾತಕೋತರ ಪದವಿ ಪಡೆದಿದ್ದಾರೆ. ಅವರು ಪ್ರಾಥಮಿಕ, ಮಾಧ್ಯಮಿಕ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೋಘವಾಹಿನಿಯಲ್ಲಿ ನಿರ್ದೆಶಕಿಯಾಗಿ, ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಕಲರವ, ಸಂಕೀರ್ತನಮಾಲ, ಶೃತಿಮಾಲ,ಜೇನಹನಿ,ಅಂತರತಮ ನೀ ಗುರು, ಶ್ರೀರಂಗ ಮಹಾತ್ಮೆ ,ಸೌಗಂಧಿಕ, ಮಧುಲತೆ,ಬೆಳ್ಳಿಬಟ್ಟಲೊಳು, ಶ್ರೀ ಶ್ರವಣ ಕೀರ್ತನ,ಸ್ಪಂದನ ಸಿರಿ, ನೆನಪಿನ ಪಯಣ, ಸ್ಪಂದನ,ಅಪರಾಧಿ ನಾನಲ್ಲ . ಪ್ರಶಸ್ತಿಗಳು: “ಸಮಾಜ ಸೇವಾ” ಪ್ರಶಸ್ತಿ, “ಸಾಹಿತ್ಯ ಮತ್ತು ಸಾಂಸ್ಕೃತಿಕ ಭೂಷಣ”ಪ್ರಶಸ್ತಿ , ನಾರಿಶಕ್ತಿ ರಾಜ್ಯ ಪ್ರಶಸ್ತಿ, ‘ಮಹಿಳಾ ...
READ MORE