'ಶ್ಚೇತ ಮಹಲ್' ಎಂಬ ಮುಖಪುಟ ನೋಡಿದಾಗಲೇ ಈ ಪುಸ್ತಕದಲ್ಲಿ ಒಂದು ನಿಗೂಢತೆ ಅಡಗಿದೆ ಎನ್ನಿಸಿತ್ತು. ಓದುತ್ತಾ ಹೋದಂತೆ ನಿಗೂಢತೆ ತುಂಬಿದ ಪತ್ತೇದಾರಿ ಶೈಲಿಯ ಕತೆ .ನಿಗೂಢ, ರೋಚಕತೆಯ ಜೊತೆಗೆ ಪರಿಸರ ಹಾಗೂ ಸಂಗೀತದ ದೃಶ್ಯಗಳು ಕಣ್ಣಿಗೆ ಕಟ್ಟಿದಂತೆ ಕಾಣುತ್ತವೆ. ನಮ್ಮ ಕುತೂಹಲ ಬೆಳೆಸುತ್ತಾ, ತಣಿಸುತ್ತಾ.. ಬುದ್ಧಿವಂತಿಕೆಗೂ ಸವಾಲು ಹಾಕುವಂತಹಾ ಕಾದಂಬರಿ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE