‘ಶ್ರಮ-ಶ್ರಮಿಕ ಮತ್ತು ಬಂಡವಾಳ ವ್ಯವಸ್ಥೆ’ ಲೇಖಕ ನಾ. ದಿವಾಕರ ಅವರ ವೈಚಾರಿಕ ಲೇಖನ ಬರಹಗಳ ಸಂಕಲನ. ಈ ಕೃತಿಯಲ್ಲಿ ಒಟ್ಟು ತೊಂಬತ್ತೆಂಟು ಬರಹಗಳಿವೆ. ನವ ಉದಾರವಾದದ ರಾಜಕೀಯಾರ್ಥಿಕತೆ, ಪ್ರಭುತ್ವಗಳಲ್ಲಿ ಅಂತರ್ಗತವಾಗಿರುವ ಹಿಂಸೆ ಮತ್ತು ಇವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ದುಡಿವ ಸಮುದಾಯಗಳ ಹೋರಾಟದ ಸ್ವರೂಪಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಲೇಖಕರು ಎಡಪಂಥೀಯ ನೇತೃತ್ವದ ಚಳುವಳಿಗಳನ್ನು ಮತ್ತು ಸಂಘಟನೆಗಳ ಕಾರ್ಯವಿಧಾನವನ್ನು ವಿಮರ್ಶಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಬರಹಗಳಲ್ಲಿ ಲೇಖಕರು ತಾವು ಒಳಗಿನವರಾಗಿ ಮಾಡುವ ವಿಮರ್ಶೆ ಈ ವಿಮರ್ಶೆಯ ನಿಜ ಅರ್ಥದಲ್ಲಿ ಹೊಸತನ್ನು ಕಟ್ಟುವ ಹಂಬಲಗಳನ್ನು ಅಂತರ್ಗತವಾಗಿಸಿಕೊಂಡಿದೆ.
ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...
READ MORE