ಶೂನ್ಯ ಸಂಪದ

Author : ಸಿ.ಕೆ ನಾವಲಗಿ

Pages 92

₹ 50.00




Year of Publication: 2013
Published by: ಕನ್ನಡ ವಚನ ಸಾಹಿತ್ಯ ಪುಸ್ತಕ ಮಾಲೆ
Address: ಶ್ರೀ ಶೂನ್ಯಸಂಪಾದನಾಮಠ, ಗುರುವಾರ ಪೇಟೆ, ಗೋಕಾಕ್‌, ಬೆಳಗಾವಿ ಜಿಲ್ಲೆ.

Synopsys

2012ರಲ್ಲಿ ನಡೆಸಿದ ಉಪನ್ಯಾಸಗಳ ಸಂಕಲಿತ ರೂಪ-ಶೂನ್ಯ ಸಂಪದ. ಎಂಟು ಮೌಲಿಕ ಲೇಖನಗಳಿವೆ. ವಚನ ಸಾಹಿತ್ಯವನ್ನು ಕೇಂದ್ರವಾಗಿರಿಸಿಕೊಂಡು ನಡೆಸಿದ ವಿಭಿನ್ನ ನೆಲೆಯ ಚಿಂತನೆಗಳು ಇಲ್ಲಿವೆ. ಶೂನ್ಯ ಸಂಪಾದನೆಯ ಸ್ವರೂಪ, ವಚನ ಸಾಹಿತ್ಯದಲ್ಲಿ ಇಹ-ಪರ, ವಚನ ಸಾಹಿತ್ಯದ ಭಾಷೆ, ವಚನಗಳು, ಮತ್ತು ಭೌಗೋಳಿಕ ಪರಿಕಲ್ಪನೆ, ವಚನಗಳಲ್ಲಿ ಆರೋಗ್ಯದ ಪರಿಕಲ್ಪನೆ, ಬಹುರೂಪಿ ಚೌಡಯ್ಯ, ಧೂಪದ ಗೊಗ್ಗವ್ವೆಯವರಂಥ ಸರಣರ ವಿಶಿಷ್ಟ ಬದುಕು ಮತ್ತು ವೈಚಾರಿಕ ನಿಲುವುಗಳು ಇಲ್ಲಿ ಸಮಾವೇಶಗೊಂಡಿವೆ.

ವೀರಣ್ಣ ರಾಜೂರ ಅವರು ಬರೆದ ಶೂನ್ಯ ಸಂಪಾದನೆ, ಸಂಗಮೇಶ ಸವದತ್ತಿಮಠ ಅವರ ವಚನಗಳ ಭಾಷೆ, ಜ್ಯೋತಿ ಹೊಸೂರ ಅವರ ವಚನಗಳ ಅನನ್ಯತೆ, ಬಸು ಬೇವಿನಗಿಡದ ಅವರ ವಚನಕಾರರ ದೃಷ್ಟಿಯಲ್ಲಿ ಇಹ-ಪರ, ಸಂಗಮೇಶ ಗುಜಗೊಂಡ ಅವರ ವಚನಗಳು ಮತ್ತು ಭೌಗೋಳಿಕ ಪರಿಕಲ್ಪನೆ, ಸಿದ್ಧಣ್ಣ ಕರ್ಕಿ ಅವರ ಬಹುರೂಪಿ ಚೌಡಯ್ಯನ ವಚನಗಳ ಪ್ರಸ್ತುತತೆ, ಶ್ರೀಶೈಲ ಮಠಪತಿ ಅವರ ಧೂಪದ ಗೊಗ್ಗವ್ವೆಯ ವಚನಗಳು: ಒಂದು ವಿವೇಚನೆ ಹಾಗು ದಯಾನಂದ ನೂಲಿ ಅವರ ವಚನಗಳಲ್ಲಿ ಆರೋಗ್ಯದ ಪರಿಕಲ್ಪನೆ ಮುಂತಾದ ಲೇಖನಗಳಿವೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books