ಶಾಲಾ ಶಿಕ್ಷಣ ಮತ್ತು ಶಿಕ್ಷಕರು ವಿಷಯವಾಗಿ ವಿವಿಧ ಲೇಖಕರು ಬರೆದ ಚಿಂತನಾಭರಿತ ಲೇಖನಗಳನ್ನು ಸಂಗ್ರಹಿಸಿದ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಕಳಕಳಿಗೆ ಸ್ಪಂದಿಸಿ ನವ ಕರ್ನಾಟಕ ಪ್ರಕಾಶನವು ಈ ಕೃತಿ ಪ್ರಕಟಿಸಿದೆ. ಶಾಲಾ ಶಿಕ್ಷಣದ ರೂಪುರೇಷೆಗಳು, ಶಿಕ್ಷಣದ ನಿರ್ದಿಷ್ಟ ಸೂಚಿಗಳು, ಭವಿಷ್ಯದ ವಿವಿಧ ವಲಯಗಳಲ್ಲಿ ಶಿಕ್ಷಣದ ಪಾತ್ರ,ಬದಲಾಗುತ್ತಿರುವ ಸನ್ನಿವೇಶಗಳೊಂದಿಗೆ ಶಿಕ್ಷಕರ ಮನೋಸಿದ್ಧತೆ ಇತ್ಯಾದಿ ಸಂಗತಿಗಳ ಕುರಿತು ಲೇಖನಗಳನ್ನು ಸಂಕಲಿಸಲಾಗಿದೆ.