‘ಸೆಲ್ಫಿ ವಿತ್ ಲೈಫ್’ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನಗಳ ಸಂಕಲನ. ಜೀವನದ ತಂಗುದಾಣದಲ್ಲಿ ಬಸ್ ಎಂದೂ ಮಿಸ್ಸಾಗುವುದಿಲ್ಲ, ಜಗತ್ತೆಂಬ ಸಾಗರದಲ್ಲಿ ಅದೃಷ್ಟ ಮೊಗೆದವನೇ ಪಾಪಿ, ಗೆಲುವು ಅಂದ್ರೆ ಗರ್ಲ್ ಫ್ರೆಂಡ್ ಇದ್ದಂತೆ, ಸದಾ ರಮಿಸುತ್ತಿರಬೇಕು, ಸಮಯ ಎಂಬ ಅರಿವು, ಅವಕಾಶ, ಅಕ್ಷಯ, ನಾವು ನಮಗಾಗಿ ಬದುಕೋಣ, ಯಾರದೋ ಅಕ್ಷರ ಇನ್ಯಾರಿಗೋ ಜೀವದರ್ಶನ, ಯಾವುದೂ ನಿಷ್ಪ್ರಯೋಜಕವಲ್ಲ, ಯಾರೂ ನಿಕೃಷ್ಟರಲ್ಲ, ಭಾರತದ ಜನ ಬುದ್ಧಿವಂತರಾಗುವುದು ಎಂದು, ಮೌಲ್ಯಗಳೇ ಧರ್ಮ, ಸಣ್ಣದು ಸುಂದರ ಪಾಲಿಸಿದರೆ ಚಂದಿರ ಸೇರಿದಂತೆ 25 ಲೇಖನಗಳಿವೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE