ಲೇಖಕ ಹೆಚ್. ಆರ್. ವಿಶ್ವಾಸ ಅವರ ಕೃತಿ ಸಂಗತ. ದಿನಪತ್ರಿಕೆಯೊಂದರಲ್ಲಿ ಪಾಕ್ಷಿಕವಾಗಿ ಪ್ರಕಟವಾದ ಅಂಕಣ ಬರಹಗಳ ಸಂಗ್ರಹ ಇದಾಗಿದೆ. ಒಟ್ಟು ಮೂವತ್ತ ಮೂರು ಬರಹಗಳನ್ನೊಳಗೊಂಡಿದೆ. ಲಲಿತಶೈಲಿಯ ಈ ಬರಹಗಳಲ್ಲಿ ಮಸಿಲೇಖನಿಯಿಂದ ಆರಂಭಿಸಿ ಸ್ಲೀಪರ್ ಕೋಚ್ ಗಳವರೆಗೆ ಹತ್ತಾರು ವಿಷಯಗಳು ಹರಡಿಕೊಂಡಿವೆ. ಕೆಲವು ಅಮೂಲ್ಯ ವ್ಯಕ್ತಿಚಿತ್ರಗಳೂ ಇವೆ. ಶತಾವಧಾನೀ ರಾ. ಗಣೇಶರ ’ಸಂಗತಕ್ಕೊಂದು ಸಾಂಗತ್ಯ’ ಎಂಬ ಹೆಸರಿನ ಆತ್ಮೀಯ ಮುನ್ನುಡಿಯೂ ಇದಕ್ಕಿದೆ.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE