ಬೆಂಗಳೂರು ಜಾಗೃತಿ ಮಹಿಳಾ ಅಧ್ಯಯನ ಕೇಂದ್ರವು ತನ್ನ ಇನ್ನಿತರ ಚಟುವಟಿಕೆಗಳ ಜೊತೆಗೆ ಅಚಲ ಮಾಸ ಪತ್ರಿಕೆಯನ್ನು ಹೊರ ತರುತ್ತಿತ್ತು. ಆ ಪತ್ರಿಕೆಯಲ್ಲಿ ಪ್ರಕಟವಾದ ವಿಶ್ಲೇಷಣಾತ್ಮಕ ಲೇಖನಗಳ ಸಂಗ್ರಹವೇ ‘ಸಂಚಲ’.
ಇಲ್ಲಿ ಹಲವು ಮಹತ್ವದ ವಿಚಾರಗಳಿಗೆ ಸಂಬಂಧಿಸಿದ ಚರ್ಚೆಗಳಿವೆ. ಇಲ್ಲಿಯ ಚರ್ಚೆಯ ಪರಿಧಿಯೊಳಗೆ ಮಹಿಳಾ ಹಕ್ಕುಗಳು, ಚರಿತ್ರೆ, ಸಂಸ್ಕೃತಿ, ಕಾನೂನು ಎಲ್ಲವೂ ಸೇರಿದ್ದು, ಇವು ಮಹಿಳಾ ಅಧ್ಯಯನ ಮತ್ತು ಹೋರಾಟದ ವ್ಯಾಪ್ತಿಯನ್ನು ಪರಿಚಯಿಸುತ್ತಲೇ ಅದಕ್ಕೊಂದು ಸೈದ್ಧಾಂತಿಕ ಚೌಕಟ್ಟನ್ನು ಕಟ್ಟಿಕೊಡುತ್ತವೆ ಮತ್ತು ಮಹಿಳಾ ಪ್ರಶ್ನೆಯ ಪರಿಕಲ್ಪನೆಗೆ ಅರ್ಥ ತುಂಬುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿಯ ಲೇಖನಗಳು ಭಾರತದ ಮಹಿಳಾ ಚಳವಳಿಯು ಸಾಗಿದ ಹೆಜ್ಜೆಗಳನ್ನು ಗುರುತಿಸುವ ಪ್ರಯತ್ನ ಮಾಡಿವೆ.
ಮಹಿಳೆಯ ಬಗೆಗಿನ ಪೂರ್ವಾಗ್ರಹ ಮತ್ತು ದೌರ್ಜನ್ಯಗಳು ಅಂತ್ಯ ಕಾಣದೇ ಇನ್ನೂ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ 'ಸಂಚಲ' ವಿಶ್ಲೇಷಿಸುವ ಸಂಗತಿಗಳು ಸಕಾಲಿಕವೂ, ಹೋರಾಟದ ಮಾರ್ಗದರ್ಶಿಯೂ ಆಗಿವೆ.
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...
READ MORE