ಲೇಖಕ ಸಂಪಟೂರು ವಿಶ್ವನಾಥ್ ಅವರ ಸಾಹಿತ್ಯ ಕೃತಿ ʻಸನಾತನ ಸುಭಾಷಿತಗಳುʼ. ಪುಸ್ತಕದಲ್ಲಿ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಹಾಗೂ ಪ್ರಭಾವಕಾರಿಯಾಗಿರುವ 1380 ಸುಭಾಷಿತಗಳು ಹಾಗೂ ಅವುಗಳ ಅರ್ಥಗಳ ಸಹಿತ ಹೇಳಲಾಗಿದೆ. ಸುಭಾಷಿತ ಎನ್ನುವುದು ಒಂದು ಸಂಸ್ಕೃತ ಪದವಾಗಿದ್ದು, ಸುಂದರವಾದ, ಅರ್ಥಪೂರ್ಣವಾದ ಅಥವಾ ಇಂಪಾದ ಪದಗಳನ್ನು ಪೋಣಿಸಿ ಆಕರ್ಷಕವಾಗಿ ಹೇಳಲು ಬಳಸುತ್ತಾರೆ. ಅಂತಹ ವಿವೇಕದ ವಚನಗಳು ಹಲವಾರು ಸಂದರ್ಭಗಳಲ್ಲಿ ಪ್ರತಿಯೊಬ್ಬರ ಜೀವನದ ಗುಣಾವಗುಣಗಳನ್ನು ವಿಮರ್ಶಿಸಲು ಹಾಗೂ ಸುಂದರವಾಗಿ ಬದುಕಲು ಸಹಾಯಮಾಡುತ್ತವೆ.
ಲೇಖಕ ಸಂಪಟೂರು ವಿಶ್ವನಾಥ್ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...
READ MORE