ಸಮುದ್ರಗೀತೆಗಳು

Author : ವಿ.ಕೃ. ಗೋಕಾಕ (ವಿನಾಯಕ)

Pages 64




Year of Publication: 2017
Published by: ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಮಾಲೆ
Address: ಕರ್ನಾಟಕ ಸರ್ಕಾರ, ಬೆಂಗಳೂರು

Synopsys

ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಮಾಲೆಯಡಿ ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿನಾಯಕ (ವಿ.ಕೃ.ಗೋಕಾಕ) ಅವರ ಕವನ ಸಂಕಲನ-ಸಮುದ್ರ ಗೀತೆಗಳು. ಸಮುದ್ರ ಗೀತೆಗಳು ಕವನ ಸಂಕಲನದಲ್ಲಿ ಒಟ್ಟು 60 ಕವನಗಳಿವೆ. ಕಡಲು, ಕಡಲತೀರ., ಹಡಗು, ಬ್ರಿಟನ್ನಿನ ದ್ವೀಪದಲ್ಲಿ ಮತ್ತು ಆತ್ಮವೃತ್ತ-ಎಂಬ ಐದು ವಿಭಾಗಗಳಲ್ಲಿ ಕವಿತೆಗಳನ್ನು ವಿಂಗಡಿಸಲಾಗಿದೆ. ಕವಿತೆಗಳನ್ನು ಲೇಖಕ ಹೇಮಂತ ಕುಲಕರ್ಣಿ ಅವರು ಪರಿಚಯಿಸಿದ್ದಾರೆ. 

ಎರಡು ವರ್ಷ ವಿ ಕೃ.ಗೋಕಾಕರು ಸಮುದ್ರದಾಚೆ (1936-38)  ಇದ್ದ ಸಂದರ್ಭದಲ್ಲಿ ಬರೆದ ಕವಿತೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಕವಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ‘ಡಾರ್ಟ್ ಮೂರ್ ಪರ್ವತಾವಳಿಯ ಬಳಿ’ ಎಂಬ ಕವನವು ಇಂಗ್ಲೆಂಡಿನ ವೈಭವಶಾಲಿಯಾದ ಡೆವ್ವನ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾಗ ಬರೆದಿದ್ದು, ಡೆವ್ವನ್ ಜಿಲ್ಲೆಯನ್ನು ಕರುನಾಡಿನ  ಮಲೆನಾಡಿಗೆ ಹೋಲಿಸಬಹುದು. ಇಲ್ಲಿಯ ಡಾರ್ಟ್ ಮೂರ್‍ ಪಟ್ಟಣ ಬಳಿ ಇರುವ ಘಟ್ಟವನ್ನು ಇಳಿದಾಗ ‘ಇಡಿಕಮ್’ ಎಂಬ ಹಳ್ಳಿಗೆ ಬರುತ್ತೇವೆ. ಅಲ್ಲಿ ಪ್ರತಿ ವರ್ಷ ವಸಂತ ಋತುವಿನಲ್ಲಿ ಜಾತ್ರೆಯಾಗುತ್ತದೆ. ಘಟ್ಟದಾಚೆಯವರು ಘಟ್ಟವನ್ನೇರಿ ಜಾತ್ರೆಗೆ ಬರುವಾಗ ಒದಗಿದ ಒಂದು ಸಂಗತಿಯನ್ನು ಕುರಿತು ‘ಇಡಿಕಮ್ ಜಾತ್ರೆ’ ಎಂಬ ಲಾವಣಿಯು ನೂರಾರು ವರ್ಷಗಳಿಂದ ಅಲ್ಲಿಯ ಜನರನ್ನು ಹಿಡಿದಿದೆ. ಇಂಗ್ಲೆಂಡಿನಲ್ಲಿ ‘ಇಡಿಕಮ್’ ಗ್ರಾಮವು ಪ್ರಸಿದ್ಧಿಗೆ ಬಂದಿದ್ದು ಈ ಲಾವಣಿಯಿಂದಲೇ. ‘ಇಡಿಕಮ್ ಜಾತ್ರೆ’ ಹೆಸರಿನಿಂದ ಇದನ್ನು ನಾನು ಅನುವಾದಿಸಿದ್ದೇನೆ. ಫ್ಯಾನ್ಸಿ ಎಂಬ ಕವನವು ಶ್ರೀಮತಿ ಎಡಿಥ್ ಟನ್ ಬ್ರಿಂಕ್ ಅವರು ನನ್ನ ಕಡೆಗೆ ಸಂದೇಶರೂಪವಾಗಿ ಕಳುಹಿಸಿದ ಕವನದ ಅನುವಾದವಾಗಿದೆ. ಟನ್ ಬ್ರಿಂಕ್ ದಂಪತಿಗಳು ಅಮೆರಿಕೆಯವರು. ಸ್ವದೇಶಕ್ಕೆ ಮರಳುವಾಗ ಹಡಗದ ಮೇಲೆ ನನಗಿವರ ಪರಿಚಯವಾಯಿತು. ಅವರ ಸಾನ್ನಿಧ್ಯದಲ್ಲಿ ನಾನು ಪಡೆದ ಅನುಭವವನ್ನು ‘ಮುಗಿಲ ಮಲ್ಲಿಗೆ’ ಎಂಬ ಕವನದಲ್ಲಿ ಸಾಧ್ಯವಿದ್ದಷ್ಟು ಮಟ್ಟಿಗೆ ಸೂಚಿಸಿದ್ದೇನೆ. ಸ್ವಚ್ಛಂದ ಛಂದದಲ್ಲಿಯೇ ಬೇರೆ ಬೇರೆ ತರಹದ ತಾಳ ಲಯವನ್ನು ಕಂಡು ಹಿಡಿಯಲಾಗಿದೆ.’ ಎಂದು ಕವನಗಳ ಸ್ವರೂಪವನ್ನು ತಿಳಿಸಿದ್ದಾರೆ. 

1940ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯು ಮೊದಲ ಬಾರಿಗೆ ಈ ಕೃತಿಯನ್ನು ಕೆಲವು ಚಿತ್ರಗಳ ಸಮೇತ ಪ್ರಕಟಿಸಿತ್ತು. ಪುಟ: 141, ಬೆಲೆ: 1 ರೂ.ಗಳು ಮಾತ್ರ. ನಂತರ, ಮೈಸೂರಿನ ಸುರುಚಿ ಪ್ರಕಾಶನವು 1967 ಹಾಗೂ 1971ರಲ್ಲಿ ಕ್ರಮವಾಗಿ 2ನೇ ಹಾಗೂ 3ನೇ ಆವೃತ್ತಿಯಾಗಿ ಪ್ರಕಟಿಸಿತು. 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books