ಸಮನ್ವಯ ಕೌಂಡಿನ್ಯ ನಾಗೇಶ ಅವರ ಕಾದಂಬರಿಯಾಗಿದೆ. ಇದು ಮನೋವೈಜ್ಞಾನಿಕ ಹಿನ್ನೆಲೆಯುಳ್ಳ,,ಸುಪ್ತ ಮನಸ್ಸಿನ ತುಡಿತದ ವಸ್ತುವನ್ನು ಹೊಂದಿರುವ ಕಾದಂಬರಿ. ಅನಾದಿ ಕಾಲದಿಂದಲೂ ಗೊಂದಲ ಉಂಟುಮಾಡಿರುವ ವಿಷಯ ಏನು? ದೇವರು - ದೆವ್ವ ಮನುಷ್ಯರ ಮೈಮೇಲೆ ಬರುವುದೇ ? ಇದು ನಿಜವೇ ? ಹಳ್ಳಿಯಲ್ಲಿರುವ ಅಮಾಯಕರು ಮಾತ್ರವಲ್ಲ, ನಗರದಲ್ಲಿರುವ ವಿದ್ಯಾವಂತರಲ್ಲಿ ಕೆಲವರು ಈ ಮೌಢ್ಯಕ್ಕೆ ಒಳಗಾಗುತ್ತಾರೆ. ಯಾಕೆ ಈ ರೀತಿ ? ಇದಕ್ಕೆ ಪೂರಕವಾಗಿ ಬಂದಿರುವ ಘಟನೆಗಳನ್ನು, ಮನಃಶಾಸ್ತ್ರದ ಸಂಹಿತೆಯೊಂದಿಗೆ, ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಿರುವ ಮನೋವೈಜ್ಞಾನಿಕ ಕಾದಂಬರಿ,
ಕೌಂಡಿನ್ಯ ಕಾವ್ಯನಾಮದಿಂದ ಪ್ರಸಿಧ್ದಿಯನ್ನು ಪಡೆದಿರುವ ವೈ.ಎನ್ ನಾಗೇಶ್ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು, ಚಲನಚಿತ್ರಗಳು ರಚಿಸಿದ್ದಾರೆ. ಪ್ರಶಸ್ತಿ ...
READ MORE