ಸಮಕಾಲೀನ ಕನ್ನಡ ಕವಿತೆ-2 , ಐವತ್ತೈದು ಕವನಗಳನ್ನು ಒಳಗೊಂಡ ಒಂದು ಕವನ ಸಂಕಲನ. ಈ ಸಂಕಲನದಲ್ಲಿ ಕಳೆದ ಅರ್ಧ ಶತಮಾನಕ್ಕೂ ಮಿಕ್ಕ ಹೊಸಗನ್ನಡ ಕಾವ್ಯ ಪರಂಪರೆಯಲ್ಲಿ ಬರೆಯುತ್ತಾ ಬಂದ ಬಹುಪಾಲು ಕವಿಗಳ ಕವನಗಳಿವೆ. ಇಲ್ಲಿರುವ ಐವತ್ತೈದು ಕವಿತೆಗಳನ್ನು ಐದು ಉಪ ವಿಭಾಗಗಳಲ್ಲಿ ಅಳವಡಿಸಲಾಗಿದೆ. ಈ ಉಪವಿಭಾಗಗಳು ಸ್ಥೂಲವಾಗಿ ಒಂದೊಂದು ವಿಷಯಾನು ಕ್ರಮವನ್ನು ಪ್ರತಿನಿಧಿಸುತ್ತವೆ. ಜೊತೆಗೆ ಸಂಗ್ರಹ ಬಹುಮಟ್ಟಿಗೆ ಹಿಂದೆ ಪ್ರಕಟವಾದ ಸಮಕಾಲೀನ ಕನ್ನಡ ಕವಿತೆ-1 ಕೃತಿಗೆ ಹಿನ್ನೆಲೆಯಾದ ಕಾಲದ ಹಲವು ಮಾರ್ಗದರ್ಶಕ ಕವಿಗಳ ಕವನಗಳನ್ನು ಒಳಗೊಂಡಿದೆ.
ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...
READ MORE