'ಸಾಹಿತ್ಯಮುಖಿ' ಕೃತಿಯು ಡಿ.ಎಸ್. ವೀರಯ್ಯ ಅವರ ಸಮಗ್ರ ಬರಹಗಳ ಸಂಪುಟ. ‘ಸಾಹಿತ್ಯಮುಖಿ’ ಕೃತಿಯು ಅಡಕಗೊಂಡಿರುವ 'ಹೋರಾಟದ ಹೆಜ್ಜೆಗಳು’ ಕನ್ನಡಕ್ಕೆ ವಿಶಿಷ್ಟವಾದ ಬರಹವೇ ಸರಿ. ಇದು ಈ ಸಂಪುಟದ ಕೊನೆಯ ಕಟ್ಟು. ಇಲ್ಲಿ ವೀರಯ್ಯ ಅವರು ಸಾಮಾಜಿಕ ಸಾಂಸ್ಕೃತಿಕ ಹೋರಾಟಗಾರರಾಗಿ ಕಾಣುತ್ತಾರೆ. ಸೃಜನಶೀಲತೆಯ ಒತ್ತಡ ಇಲ್ಲದಿದ್ದರೆ, ಇಂಥದೊಂದು ಕೃತಿ ಹೊರಬರಲು ಸಾಧ್ಯವಾಗುತ್ತಿರಲಿಲ್ಲವೆಂದು ನನಗೆ ತೋರುತ್ತದೆ. ಅಂಬೇಡ್ಕರ್ ಅವರ ನಿಲುವುಗಳ ನಿಜಸಾಕ್ಷಾತ್ಕಾರವಾಗಿ ಇಲ್ಲಿಯ ಬರೆಹಗಳಾಗಿ ರೂಪತಾಳಿವೆ. ಅಂಬೇಡ್ಕರ್ ಅವರು ಶಿಕ್ಷಣ ಮತ್ತು ಹೋರಾಟಕ್ಕೆ ಆದ್ಯತೆಯನ್ನು ನೀಡಿದರು. ಶಿಕ್ಷಣವು ನಮ್ಮ ಮೂಲಭೂತ ಹಕ್ಕಾದರೆ, ಹೋರಾಟವು ನಮ್ಮ ಪ್ರಗತಿಮೀಮಾಂಸೆ ಆಳತೆಗೋಲು, ನಮ್ಮ ಹಕ್ಕಿಗಾಗಿ ನಾವು ಅನೇಕ ಬಾರಿ ಹೋರಾಟ ಮಾಡಬೇಕಾಗುತ್ತದೆ. ವೀರಯ್ಯ ಹೋರಾಟದ ಹೆಜ್ಜೆಗಳ ಅಣುಕ್ಷಣವನ್ನು ಬರಹರೂಪಕ್ಕೆ ಇಳಿಸಿದ್ದಾರೆ, ಇವರು ಬಸವಲಿಂಗಪ್ಪ, ರಾಮಕೃಷ್ಣ ಹೆಗ್ಗಡೆ, ಜೀವರಾಜ ಆಳ್ವ, ಮುಂತಾದವರ ಜತೆ ರಾಜಕಾರಣದಲ್ಲಿ ಓಡಾಟ ಮಾಡಿದವರು ಸಾಮಾಜಿಕ ಸತ್ಯಕ್ಕಾಗಿ ಅಂಥವರ ವಿರುದ್ಧ ಪ್ರತಿಭಟನೆ ಮಾಡಬೇಕಾದಾಗ ಹಿಂಜರಿಯದೆ ಉಳಿದವರೆಂಬುದು ಅಷ್ಟೇ ಸತ್ಯ. ಇಂಥ ಅನೇಕ ಪ್ರಸಂಗಗಳು ಇಲ್ಲಿ ಬಂದಿವೆ. ಪ್ರತಿಯೊಬ್ಬರೂ ರಾಜಕೀಯ ಸ್ಥಾನ-ಮಾನಕ್ಕಾಗಿ ಹೋರಾಡುವುದುಂಟು. ಆದರೆ, ವೀರಯ್ಯ ಅದನ್ನು ಅಲಕ್ಷಿಸಿದವರಲ್ಲ, ಆದರೆ, ರಾಜಕೀಯ ಸ್ಥಾನ-ಮಾನವನ್ನು ಸಮುದಾಯದ ಪ್ರಗತಿಗಾಗಿ ಬಯಸಿದವರು. ಇಲ್ಲಿಯ ಆನೇಕ ಘಟನೆಗಳೂ ಪ್ರಸಂಗಗಳ ಇಂಥ ಸಂಗತಿಗಳನ್ನು ನಮ್ಮ ಗಮನಕ್ಕೆ ತರುತ್ತವೆ, ಹಳ್ಳಿಯ ಮುಗ್ಧಹುಡುಗನೊಬ್ಬ ಶಿಕ್ಷಣ ಪಡೆಯುತ್ತ ಕಾಲಕ್ರಮೇಣ ರಾಜಕೀಯಪ್ರಜ್ಞೆ ಪಡೆದಾದ ಮೇಲೆ ಸಮುದಾಯಪ್ರಜ್ಞೆಯ ಬಲವತ್ತರವನ್ನು ಕಂಡ ಬಗೆ ಮೈದಾಳಿದೆ. ವೀರಯ್ಯನವರು ಗ್ರಾಮಸಮಾಜದ ಒಳಸುಳಿಗಳನ್ನು ಬಲ್ಲವರು, ಅದಕ್ಕೆ ತಕ್ಕಂತೆ ಹೋರಾಟದ ಸ್ವರೂಪವನ್ನು ಬದಲಿಸಬಲ್ಲರು. ಇದೇ ಸಂಗತಿಯನ್ನು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲೂ ವಿಸ್ತರಣೆಗೊಂಡದ್ದನ್ನು ಇಲ್ಲಿಯ ಪ್ರಸಂಗಗಳಲ್ಲಿ ನಾವು ಕಾಣುತ್ತೇವೆ. ಇಲ್ಲಿಯ ಬರಹ ಕರ್ನಾಟಕ ದಲಿತ ಸಾಮಾಜಿಕ ಚರಿತ್ರೆಯನ್ನು ಬರೆಯುವವರಿಗೆ ಆಕರಸಾಮಗ್ರಿ ಒದಗಿಸಬಲ್ಲುದು ಎಂದು ವಿಶ್ಲೇಷಿಸಲಾಗಿದೆ.
ಲೇಖಕ ಡಿ.ಎಸ್. ವೀರಯ್ಯ ಅವರು ಬೆಂಗಳೂರಿನ ಗಿರಿನಗರದವರು. ಎಂ.ಕಾಂ, ಎಲ್.ಎಲ್.ಬಿ, ಡಿ.ಪಿ.ಎಂ ಹಾಗೂ ಐಆರ್, ಡಿಪ್ಲೊಮಾ ಇನ್ ಜರ್ನಲಿಸಂ ಪದವೀಧರರು. ಪ್ರಸ್ತುತ ಡಿ. ದೇವರಾಜ್ ಟ್ರಕ್ಕ್ ಟರ್ಮಿನಲ್ ಅಧ್ಯಕ್ಷರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ರಾಜ್ಯ ಕನ್ನಡ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು. ಪ್ರಶಸ್ತಿ-ಪುರಸ್ಕಾರಗಳು: ಸಮಾಜ ರತ್ನ, ಕರ್ನಾಟಕ ರತ್ನ, ಬುದ್ಧ ರತ್ನ, ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ, ಸರ್. ಎಂ.ವಿಶ್ವೇಶ್ವರಯ್ಯ ಆವಾರ್ಡ್, ಸಂಘಟನ ಶಿಲ್ಪಿ ಸೇರಿದಂತೆ ಹಲವಾರು ಪ್ರಶಸ್ತಿ-ಗೌರವಗಳು ಲಭಿಸಿವೆ. ...
READ MORE