‘ಸಾಹಿತ್ಯ ಮತ್ತು ಸಾಹಿತ್ಯದಾಚೆಗೆ’ ಕೃತಿಯು ಆರ್. ಚಲಪತಿ ಅವರ ಲೇಖನಗಳ ಸಂಕಲನವಾಗಿದೆ. ‘ಅಧಿಕಾರ ಚಲನೆಯ ಅನಧಿಕೃತ ವರಸೆಗಳು’ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನವ ಉದಾರವಾದಿ ವರಸೆ ಭಾಷೆ ಮತ್ತು ಆ ಭಾಷೆಯನ್ನಾಡುವ ಜನರನ್ನು ತಮ್ಮ ನಿರ್ದಿಷ್ಟವಾದ ಅನುಭವ ಜಗತ್ತಿಗೆ ಮತ್ತೆ ಮತ್ತೆ ತಳ್ಳುತ್ತಿರುತ್ತದೆ. ಈ ಮೂಲಕ, ಮಾರುಕಟ್ಟೆ ತನ್ನ ವಿಶ್ವಸ್ಥ ಸ್ವರೂಪವನ್ನು ಸಾಧಿಸುತ್ತದೆ ಮತ್ತು ನಮ್ಮನ್ನು ಅದರೊಳಗೆ ಸೇರಿಯೂ ಸೇರದಂಥ `ಪ್ರತ್ಯೇಕತೆ’ಯನ್ನು ಉಳಿಸಿಕೊಳ್ಳುತ್ತಿರುತ್ತದೆ. ಇದು ಲಾಭಕೋರತನವನ್ನು ಪುಸಲಾಯಿಸುವ ನುರಿತ ಚೇಷ್ಟೆ. ಆದರೆ, ಇಲ್ಲಿ ಆಡುಮಾತಿನ ವರಸೆಯತ್ತ ಬರಹ ದಾಪುಗಾಲಿಟ್ಟು, ಬರಹದ ಮೂಲಕ ಭಾಷೆಯನ್ನು ಪ್ರಮಾಣೀಕರಿಸಿರುವ ಬಗೆಯನ್ನು ನಾವು ಗಮನಿಸಲೇ ಬೇಕು. ಆದರೆ, ಹಾಗೆ ಮಾಡುವಾಗ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಅವಕಾಶಗಳನ್ನು ಮರೆಯಬಾರದಷ್ಟೆ ’ ಎಂದು ವಿಶ್ಲೇಷಿತವಾಗಿದೆ.
ಡಾ. ಆರ್. ಚಲಪತಿ ಅವರು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿದ್ದಾರೆ. ಅದಕ್ಕೂ ಮುನ್ನ ಬೆಂಗಳೂರಿನ ನಾಗಾರ್ಜುನ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿಯ ನಂದಿಹಳ್ಳಿ ಪಿಜಿ ನೆಂಟರ್ಗಳಲ್ಲಿ ಅಧ್ಯಾಪಕರಾಗಿದ್ದರು. ಅಖಿಲ ಭಾರತೀಯ ಸಂತ ಕನಕದಾಸರ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳಲ್ಲಿ ಸಂಶೋಧನೆ ಕೈಗೊಂಡಿದ್ದರು. ಚಲಪತಿ ಅವರ ಪ್ರಕಟಿತ ಕೃತಿಗಳು: ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ, ನಮ್ಮದೇ ತಿಳಿವಿನ ದಾರಿಯಲ್ಲಿ, ...
READ MORE