‘ಸಾಹಿತ್ಯ ಮತ್ತು ಸಂಸ್ಕೃತಿ’ ಕೃತಿಯು ಎನ್. ಚಂದ್ರಶೇಖರ್ ಅವರ ಗ್ರಂಥವಾಗಿದೆ. ಇಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯದ ಆಗ್ನೇಯ ಭಾಗದಲ್ಲಿರುವ ತುಮಕೂರು ಜಿಲ್ಲೆಯು ವಿಶಾಲವಾದ ಬಯಲು ಪ್ರದೇಶದಿಂದ ಕೂಡಿದ್ದು ಇಲ್ಲಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ವೈವಿಧ್ಯ ಶಿಲ್ಪಕಲೆ, ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಲಲಿತ ಕಲೆಗಳ ಬೀಡೆನಿಸಿದ್ದು ಜನಪದ, ಯಕ್ಷಗಾನ, ರಂಗಭೂಮಿಗಳ ತ್ರಿವೇಣಿ ಸಂಗಮವಾಗಿದೆ. “ಕಲ್ಪತರು ನಾಡು” ಎಂಬ ಅನ್ವರ್ಥನಾಮವನ್ನು ಹೊಂದಿದ್ದು ಗಂಗರಸ ದುರ್ವಿನೀತನ ಕಾಲದ ತಾಮ್ರಶಾಸನವೊಂದರಲ್ಲಿ ಉಲ್ಲೇಖಿತವಾಗಿರುವಂತೆ ‘ಸುಜನ ಜನಪದ’ರೆಂಬ ನುಡಿಗಟ್ಟನ್ನು ಅರ್ಥವತ್ತಾಗಿಸಿದೆ. ಕರ್ನಾಟಕದ ಪ್ರಮುಖ ರಾಜಮನೆತನವಾದ ಗಂಗರ ಆಳ್ವಿಕೆಗೆ ಜಿಲ್ಲೆಯ ದಕ್ಷಿಣಭಾಗವು ಒಳಪಟ್ಟಿದ್ದು ಅವರ ಕಾಲದ ಶಾಸನ, ವಾಸ್ತುಶಿಲ್ಪಗಳು ಇಂದಿಗೂ ಉಳಿದು ಬಂದಿವೆ. ಈ ಮನೆತನದೊಂದಿಗೆ ರಕ್ತಸಂಬಂಧವಿರಿಸಿಕೊಂಡಿದ್ದ ನೊಳಂಬರು ಜಿಲ್ಲೆಯ ಪೂರ್ವಭಾಗದ ಮೇಲೆ ನಿಯಂತ್ರಣ ಹೊಂದಿದ್ದು, ಆ ಭಾಗದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದು ಶಾಸನೋಕ್ತವಾಗಿವೆ. ನೊಳಂಬರ ರಾಜಧಾನಿಯಾಗಿದ್ದ ಹೇಮಾವತಿಯು (ಹೆಂಜೇರು–ಮಡಕಶಿರಾ ತಾಲೂಕು, ಅನಂತಪುರ ಜಿಲ್ಲೆ, ಆಂಧಪ್ರದೇಶ) ಹಿಂದೆ, ತುಮಕೂರು ಜಿಲ್ಲೆಯಲ್ಲಿಯೇ ಇದ್ದು, ಜಿಲ್ಲೆಯ ಹಲವೆಡೆ ನೊಳಂಬರ ವಾಸ್ತುಶಿಲ್ಪ ಪ್ರಭಾವ ಕಂಡುಬರುತ್ತದೆ. ರಾಷ್ಟ್ರಕೂಟ ಕೃಷ್ಣನ ಗುಬ್ಬಿ ತಾಮ್ರಶಾಸನವು ಅವರ ವಂಶಾವಳಿ ಹಾಗೂ ಎಲ್ಲೋರಾದಲ್ಲಿ ನಿರ್ಮಾಣಗೊಂಡ ದೇವಾಲಯದ ಬಗ್ಗೆ ಮಾಹಿತಿಯನ್ನು ಒದಗಿಸುವ ಅಪೂರ್ವ ಶಾಸನವಾಗಿದೆ ಎನ್ನುವುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ.
ಎನ್. ಚಂದ್ರಶೇಖರ್ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಕರ್ನಾಟಕದ ಸಾಹಿತ್ಯ ಹಾಗೂ ಸಂಸ್ಕೃತಿಯ ಕುರಿತು ಇವರು ನಡೆಸಿದ ಅಧ್ಯಯನ ಹಾಗೂ ಕೃತಿಗಳ ರಚನೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿರುತ್ತದೆ. ಕೃತಿಗಳು: ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಾಯ-14, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಾಯ-13 ...
READ MORE