ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ಶಾಸ್ತ್ಯೀಯ ಮಾಲೆಯಡಿ 11ನೇ ಸಂಪುಟವಾಗಿ ಪ್ರಕಟವಾದ ಕೃತಿ-ಸಾಹಿತ್ಯ ಚಾರಣ. ಈ ಕೃತಿಯಲ್ಲಿ ಲೇಖನಗಳು, ಭಾಷಣಗಳು ಹಾಗೂ ಮುನ್ನುಡಿಗಳನ್ನು ಸಂಗ್ರಹಿಸಿ, ಸಂಪಾದಿಸಿ ನೀಡಲಾಗಿದೆ. ಈ ಎಲ್ಲವೂ ಟಿ.ವಿ.. ವೆಂಕಟಾಚಲ ಶಾಸ್ತ್ರೀಗಳ ವಿದ್ವತ್ ಪೂರ್ಣ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಭಾಷೆ ಅಧ್ಯಯನಕ್ಕೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿಯೂ ಇರಲಿದೆ.
ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...
READ MORE